ಸ್ವರ್ಗದಲ್ಲಿ ಉಚಿತ ಹೋಮಿಯೋ ವೈದ್ಯಕೀಯ ಶಿಬಿರ ಹಾಗೂ ಜಾಗೃತಿ ತರಗತಿ

ಸ್ವರ್ಗದಲ್ಲಿ ಉಚಿತ ಹೋಮಿಯೋ ವೈದ್ಯಕೀಯ ಶಿಬಿರ ಹಾಗೂ ಜಾಗೃತಿ ತರಗತಿ
ಸ್ವರ್ಗ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪೆರ್ಲ: ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರ (ಹೋಮಿಯೋ) ಎಣ್ಮಕಜೆ ಹಾಗೂ ಎಣ್ಮಕಜೆ ಗ್ರಾ ಪಂ ಜಂಟಿ ಆಶ್ರಯದಲ್ಲಿ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಉಚಿತ ಹೋಮಿಯೋ ವೈದ್ಯಕೀಯ ಶಿಬಿರ ಮತ್ತು ಜಾಗೃತಿ ತರಗತಿಯನ್ನು ಆಯೋಜಿಸಲಾಯಿತು.
ಗ್ರಾಪಂ ಸದಸ್ಯ ರಾಮಚಂದ್ರ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಎಣ್ಮಕಜೆ ಗ್ರಾಪಂ ಸದಸ್ಯ ರಾಮಚಂದ್ರ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸ್ವರ್ಗ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಶಿಬಿರದ ಪ್ರಮುಖ ಭಾಗವಾಗಿ ಸಾರ್ವಜನಿಕರಿಗಾಗಿ ಹೋಮಿಯೋ ವೈದ್ಯ ಪದ್ಧತಿಯ ಕುರಿತು ಜಾಗೃತಿ ತರಗತಿಯನ್ನು ನಡೆಸಲಾಯಿತು. ಎಣ್ಮಕಜೆ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೀತಲ್ ಹಾಗೂ ಕಾರಡ್ಕ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಲೀನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಹೋಮಿಯೋ ವೈದ್ಯ ಪದ್ಧತಿಯ ಮಹತ್ವ, ಚಿಕಿತ್ಸಾ ವಿಧಾನ ಹಾಗೂ ಅದರ ಪ್ರಯೋಜನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡವು, ಅಗತ್ಯ ಆರೋಗ್ಯ ಸಲಹೆ ಹಾಗೂ ಉಚಿತ ಔಷಧಗಳನ್ನು ವಿತರಿಸಿತು. 

ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನು ಪರೀಕ್ಷಿಸಿದ ಹೋಮಿಯೋಪಥಿ ವೈದ್ಯರ ತಂಡವು, ಅಗತ್ಯ ಆರೋಗ್ಯ ಸಲಹೆ ಹಾಗೂ ಉಚಿತ ಔಷಧಗಳನ್ನು ವಿತರಿಸಿತು.

ಕಾರ್ಯಕ್ರಮದ ಆರಂಭದಲ್ಲಿ ಡಾ.ಶೀತಲ್ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಚಂದ್ರಾವತಿ ಎ.ಟಿ. ವಂದಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

 

: 

Comments