ಎಡನೀರು ಶ್ರೀಗಳಿಗೆ ಶಬರಿ ಗಿರಿಯ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದ ಪದಾಧಿಕಾರಿಗಳು
ಬದಿಯಡ್ಕ,ಶಬರಿಗಿರಿ ನೂತನ ಶ್ರೀ ಅಯ್ಯಪ್ಪ ಮಂದಿರದ ಪ್ರತಿಷ್ಠಾ ಕಾರ್ಯ ಹಾಗೂ ಶ್ರೀ ಅಯ್ಯಪ್ಪ ತಿರುವಿಳಕ್ಕೆ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು..
ಸ್ವಾಮಿಯೇ ಶರಣಂ ಅಯ್ಯಪ್ಪಾ" ಎಂಬ ಮಂತ್ರ ಅವರ ಭಕ್ತರ ಬದುಕಿನಲ್ಲಿ ಶಾಂತಿ, ಶಿಸ್ತು ಹಾಗೂ ಭಕ್ತಿ ಬೆಳೆಯಲು ಪ್ರೇರೇಪಿಸುತ್ತದೆ. ಅಯ್ಯಪ್ಪ ಸ್ವಾಮಿ ಕಥೆಗಳು ಕೂಡಾ ತ್ಯಾಗದ ಮೌಲ್ಯ, ಧೈರ್ಯ ಹಾಗೂ ಸಹಿಷ್ಣುತೆಯ ಮೇಲೆ ಒತ್ತಡ ಹಾಕುತ್ತವೆ. ಭಕ್ತರು ಕಠಿಣ ವೃತಗಳು, ಶರಣಾಗತಿ ಭಾವ ಹಾಗೂ ಸರಳ ಜೀವನದ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಾರೆ. ಅದೇ ರೀತಿ ಮಂದಿರ ಪುನರ್ ನಿರ್ಮಾಣಗೊಂಡು ಪ್ರತಿಷ್ಠಾಪನೆ ನಡೆದು ನಾವು ಸ್ವಾಮಿಯ ಕೃಪೆಗೆ ಪಾತ್ರರಾಗೋಣ ಎಂದು ಹರಸಿದರು .ಈ ಸಂದರ್ಭದಲ್ಲಿ ಗಿರೀಶ್ ರೈ ಒಳಮಲೆ ನರೇಂದ್ರ ಬಿ ಎಂ ಉಮೇಶ್ , ಡಾ ಶ್ರೀನಿಧಿ ಸರಳಾಯ ,ರಾಜೇಶ್ ಮಾಸ್ತರ್ ಚಂಬಲ್ತಿಮಾರ್ ಕೃಷ್ಣಚಳ್ಳಿಕಾನ ,ಪ್ರತೀಕ್ ಆಳ್ವ ಮಹಿಳಾ ಸಮಿತಿಯ ಜಗದಂಬ, ಪ್ರವೀಣ ಉಪಸ್ಥಿತರಿದ್ದರು
Comments
Post a Comment