- Get link
- X
- Other Apps
ವಾಣಿನಗರ ಅಕ್ಷಯ ಕೇಂದ್ರದಲ್ಲಿ ನೂತನ ಆಧಾರ್ ನೋಂದಣಿ ಸೇವೆ ಉದ್ಘಾಟನೆ
ಪೆರ್ಲ: ಗ್ರಾಮೀಣ ಭಾಗದ ಜನರಿಗೆ ಡಿಜಿಟಲ್ ಯುಗದ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ, ವಾಣಿನಗರದ ಅಕ್ಷಯ ಕೇಂದ್ರದಲ್ಲಿ ನೂತನ ಆಧಾರ್ ನೋಂದಣಿ ಕೇಂದ್ರದ ಉದ್ಘಾಟನಾ ಸಮಾರಂಭವು ಸೋಮವಾರ ಅತ್ಯಂತ ಯಶಸ್ವಿಯಾಗಿ ಜರುಗಿತು.
ಎಣ್ಮಕಜೆ ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ. ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ನೂತನ ಆಧಾರ್ ನೋಂದಣಿ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಡಿಜಿಟಲ್ ಸೇವೆಗಳು ಈಗ ಒಂದೇ ಸೂರಿನಡಿ ಲಭ್ಯವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಸದಸ್ಯ ರಾಮಚಂದ್ರ ಎಂ., 'ಈ ಹೊಸ ಕೇಂದ್ರದ ಉದ್ಘಾಟನೆಯೊಂದಿಗೆ ಸಾರ್ವಜನಿಕರಿಗೆ ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ನವೀಕರಣ, ಡೆಮೊಗ್ರಾಫಿಕ್ ಅಪ್‌ಡೇಟ್ ಹಾಗೂ ಇ-ಆಧಾರ್ ಡೌನ್‌ಲೋಡ್ ಸೇರಿದಂತೆ ಪ್ರಮುಖ ಆಧಾರ್ ಸೌಲಭ್ಯಗಳಿಗಾಗಿ ದೂರದ ಪ್ರದೇಶಗಳಿಗೆ ಅಲೆದಾಡುವುದು ತಪ್ಪಿದಂತಾಗಿದೆ. ಇನ್ಮುಂದೆ ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಸೇವೆಗಳು ವಾಣಿನಗರದ ಅಕ್ಷಯ ಕೇಂದ್ರದಲ್ಲೇ ದೊರೆಯಲಿವೆ' ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ನಳಿನಾಕ್ಷಿ ಸಿ.ಸಿ. ಹಾಗೂ ಪುಷ್ಪಾವತಿ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾಜಿ ಸದಸ್ಯರಾದ ನರಸಿಂಹ ಪೂಜಾರಿ ಎಸ್.ಬಿ., ರವಿ ವಾಣೀನಗರ, ಕಟ್ಟಡದ ಮಾಲೀಕ ಮಾಧವ ವಾಣೀನಗರ, ಸುಬ್ರಹ್ಮಣ್ಯ ಕಡಂಬಳಿತ್ತಾಯ, ಕೃಷ್ಣಕುಮಾರ್ ನೆಕ್ಕರೆಕಾಡು, ಉದಯಶಂಕರ ಭಟ್ ಕಿಳಿಂಗಾರು, ಈಶ್ವರ ಪ್ರಸಾದ್ ಕಡಂಬಳಿತ್ತಾಯ, ರಾಧಾಕೃಷ್ಣ ಭಟ್ ಪತ್ತಡ್ಕ, ಸುಧಾ ಶೆಣೈ, ಸದಾಶಿವ ನಾಯ್ಕ್ ಕೊಲ್ಯ, ಅಕ್ಷಯ ಕೇಂದ್ರದ ವ್ಯವಸ್ಥಾಪನಾ ನಿರ್ವಾಹಕಿ ಪ್ರತಿಭಾ ಕೆ.ಎಸ್., ಸಹಾಯಕ ನಿರ್ವಾಹಕಿ ರಂಜಿತಾ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
- Get link
- X
- Other Apps
Comments
Post a Comment