ಕಳೆದ 6 ವರುಷಗಳಿಂದ ಶ್ರೀ ಗಣೇಶ ಮಂದಿರದಲ್ಲಿ ಅತ್ಯಂತ ಸರಳ ರೀತಿಯಲ್ಲಿ ವಿಜಯದಶಮಿ ಆಚರಣೆಯನ್ನು ನಡೆಸುತ್ತ ಬರುತ್ತಿದ್ದು ಪ್ರಸ್ತುತ ವರುಷದಿಂದ ಶ್ರೀ ಗಣೇಶ ಮಂದಿರದಲ್ಲಿ ಹಿಂದೂ ಸಮಾಜ ಭಾಂದವರಾದ ಮರಾಟಿ ಸಮುದಾಯದ
ವತಿಯಿಂದ ಈ ಹಿಂದೆ ಗುರು ಸದನದಲ್ಲಿ ನಡೆಯುತ್ತಿದ್ದ ಶಾರದೋತ್ಸವನ್ನು ಶ್ರೀ ಗಣೇಶ ಮಂದಿರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿ ಉತ್ಸವವನ್ನು ಆಚರಿಸಲು ಸ್ಥಳವಕಾಶವನ್ನು ಅರಸಿ ಬಂದಿದ್ದು ಅವರಿಗೆ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ. ಆ ಪ್ರಯುಕ್ತ ದಿನಾಂಕ 20,21/10/26 ರಂದು ವಿವಿಧ ಸಮುದಾಯಿಕ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಗಣೇಶ ಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆದು ಕೊಂಡು ಬರುತ್ತಿದ್ದ ಉತ್ಸವ ಕಾರ್ಯಕ್ರಮಗಳನ್ನು ಯಾವ ರೀತಿಯಲ್ಲಿ ನಡೆಸಬಹುದೆಂದು ದೈವಜ್ಞರಲ್ಲಿ ಪ್ರಶ್ನೆ ಚಿಂತನೆ ನಡೆಸಿದ ಪ್ರಕಾರ ಸರಳ ರೀತಿಯಲ್ಲಿ ದಿನಾಂಕ 21/10/26 ರಂದು ಬೆಳಿಗ್ಗೆ 7.00 ಗಂಟೆಗೆ ಪೂಜೆ
7.30 ಕ್ಕೆ ಗಣಪತಿ ಹವನ
ವಿದ್ಯಾರಂಭ ಬೆಳಿಗ್ಗೆ 10.30 ಕ್ಕೆ
ಮದ್ಯಾಹ್ನ 12.15 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ,ಭೋಜನ. ಪ್ರತ್ಯೇಕ ಶಾರದೋತ್ಸವ ನಡೆಯುವ ಕಾರಣ ಮರಾಟಿ ಸಮುದಾಯದವರೊಂದಿಗೆ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಇದೆ. ಭೋಜನಕ್ಕಾಗಿ ಅಕ್ಕಿ, ತೆಂಗಿನಕಾಯಿ, ತರಕಾರಿ ಸಮರ್ಪಿಸಬಹುದು ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಶ್ರೀ ಶಾರದೋತ್ಸವ ಸಮಿತಿಗೆ ಭೋಜನ ಪ್ರಸಾದಕ್ಕೆ ಬೇಕಾದ ಸಹಕಾರ ನೀಡಿ ಉತ್ಸವ ಯಶಸ್ವೀಗೆ ಸಹಕರಿಸಲಾಗುವುದು. ಭಗವದ್ಭಕ್ತರಾದ ತಾವೆಲ್ಲರೂ ಈ ಶುಭ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🙏ಈ ಶುಭ ಕಾರ್ಯಕ್ರಮವು ಎಲ್ಲರಿಗೂ ಮಾದರಿಯಾಗಿ ಹಿಂದೂ ಸಮುದಾಯದ ಐಕ್ಯತೆ ನಾಡಿನ ಜನತೆಯ ಏಕತೆಗೆ ನಾಂದಿಹಾಡು
Comments
Post a Comment