- Get link
- X
- Other Apps
ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ
ಕುಂಬಳೆ: ಇಚ್ಚಂಪಾಡಿ ದರ್ಬಾರ್ ಕಟ್ಟೆ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಭಜನಾ ಸಂಕೀರ್ತನೆ, ನವರಾತ್ರಿ ಸಂಗೀತೋತ್ಸವಮತ್ತು ಯಕ್ಷನವಾಹಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.11ರಂದು ಆರಂಭಗೊಂಡಿದ್ದು, ಅ.20ರಂದು ಸಮಾಪ್ತಿಯಾಗಲಿವೆ. ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗುತ್ತಿವೆ. ಅ.16ರಂದು ಬೆಳಗ್ಗೆ 8ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ, 1ರಿಂದ ಗಾನಸುಧಾ, ರಾತ್ರಿ 7.30ಕ್ಕೆ ವಿಶೇಷ ಕಾರ್ತಿಕ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, 1 ಪ್ರಸಾದ ಭೋಜನ, 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.17ರಂದು ಬೆಳಗ್ಗೆ 7.30ಕ್ಕೆ ಭಜನಾ ಸಂಕೀರ್ತನೆ, 9ರಿಂದ ದುರ್ಗಾಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ, ರಾತ್ರಿ 7ಕ್ಕೆ ದುರ್ಗಾಪೂಜೆ, ಮಹಾಪೂಜೆ, ಪ್ರಸಾದ 7.30ರಿಂದ ಭೋಜನ, 8ರಿಂದ ಸಾಂಸ್ಕೃತಿಕ ಕಲಾ ವೈಭವ ಜರಗಲಿದೆ.
ಭಜನಾ ಅ.18ರಂದು ಬೆಳಗ್ಗೆ 8ರಿಂದ ಭಜನಾ ಸಂಕೀರ್ತನೆ, 10ಕ್ಕೆ ಸಂಗೀತಾರ್ಚನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ, ಸಂಜೆ 5ರಿಂದ ಸಂಕೀರ್ತನೆ, ರಾತ್ರಿ 7.30ಕ್ಕೆ ವಿಶೇಷ ಕಾರ್ತಿಕ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ಭೋಜನ, 8ರಿಂದ ಭರತನಾಟ್ಯ ನೆರವೇರಲಿದೆ.
ಅ.19ರಂದು ಬೆಳಗ್ಗೆ 7.30ರಿಂದ ಸಪ್ತಶತೀ ಪಾರಾಯಣ, ವಾಹನಪೂಜೆ 8ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಲಂಕಾರಪೂಜೆ, ಪ್ರಸಾದ ಭೋಜನ, ಸಂಜೆ 5ರಿಂದ ಭಜನಾ ಸಂಕೀರ್ತನೆ, ರಾತ್ರಿ 7.30ಕ್ಕೆ ವಿಶೇಷ ಕಾರ್ತಿಕ ಪೂಜೆ, ಅಲಂಕಾರ ಪೂಜೆ, 8ರಿಂದ ಮಹಾಪೂಜೆ, ಪ್ರಸಾದ ಭೋಜನ, ತಿರುವಾದಿರ, ಭಕ್ತಿಗಾನ ಜರಗಲಿದೆ. ಅ.20ರಂದು ಬೆಳಗ್ಗೆ 7.30ಕ್ಕೆ ಸಪ್ತಶತೀ ಪಾರಾಯಣ, ಸರಸ್ವತೀ ಪೂಜೆ, 8ರಿಂದ ವಿದ್ಯಾರಂಭ, ಭಜನಾ ಸಂಕೀರ್ತನೆ, 10ರಿಂದ ಸಂಗೀತ ಕಛೇರಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಲಂಕಾರ ಪೂಜೆ, ಪ್ರಸಾದ ಭೋಜನ ಸಂಜೆ 5ರಿಂದ ಭಜನಾ ಸಂಕೀರ್ತನೆ, ರಾತ್ರಿ 7.30ಕ್ಕೆ ವಿಶೇಷ ಕಾರ್ತಿಕ ಪೂಜೆ, ಅಲಂಕಾರ ಪೂಜೆ ಮಹಾಪೂಜೆ, ಪ್ರಸಾದ ಭೋಜನ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
- Get link
- X
- Other Apps








Comments
Post a Comment