ಕ್ಯಾಂಪ್ಕೋದಿಂದ ಚಿಕಿತ್ಸಾ ಧನಸಹಾಯ*

*ಕ್ಯಾಂಪ್ಕೋದಿಂದ ಚಿಕಿತ್ಸಾ ಧನಸಹಾಯ*
ಕ್ಯಾಂಪ್ಕೋ ಸ್ವಾಂತನ ಚಿಕಿತ್ಸಾ ಧನಸಹಾಯ ಯೋಜನೆಯಡಿ ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ಕ್ಯಾಂಪ್ಕೋ ಸಕ್ರೀಯ ಸದಸ್ಯರಿಗೆ ನೀಡಲಾಗುವ ಚಿಕಿತ್ಸಾ ಧನಸಹಾಯದ ಅಂಗವಾಗಿ,  ಮುಳಿಯಾರ್ ನಿವಾಸಿ ಶ್ರೀ ಅಬ್ದುಲ್ ಖಾದರ್ ಅವರಿಗೆ ₹50,000/- ಮೊತ್ತದ ಧನಸಹಾಯದ ಚೆಕ್ ಅನ್ನು ಕ್ಯಾಂಪ್ಕೋ ನಿರ್ದೇಶಕರಾದ ಶ್ರೀ ಸತ್ಯನಾರಾಯಣ ಪ್ರಸಾದ್ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಚಂದ್ರ ಎಂ., ಕ್ಯಾಂಪ್ಕೋ ಮುಳಿಯಾರ್ ಶಾಖಾ ವ್ಯವಸ್ಥಾಪಕರಾದ ಶ್ರೀ ಅನಂತೇಶ್ವರ ನಾಯಕ್ ಹಾಗೂ ಸಿಬ್ಬಂದಿ ಶ್ರೀಮತಿ ವಾಣಿ ಸರಸ್ವತಿ ಅವರು ಉಪಸ್ಥಿತರಿದ್ದರು.

Comments