ಕೂಡ್ಲು ರಜತರಂಗ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯ ಬೇಟಿ .

ಕೂಡ್ಲು ರಜತರಂಗ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯ ಬೇಟಿ 
ಕಾಸರಗೋಡು : ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಕೂಡ್ಲು ಕುತ್ಯಾಳ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿಹಬ್ಬಾಚರಣೆ ಅಂಗವಾಗಿ ನಡೆಯುತ್ತಿರುವ ರಜತರಂಗದ ಸರಣಿ ಕಾರ್ಯಕ್ರಮದ ಸಮಾರೋಪ ಅಕ್ಟೋನರ್ 31 ನವಂಬರ್ 1 ರಂದು ಕೂಡ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಲಿದೆ ಈ ಕಾರ್ಯಕ್ರಮಕ್ಕೆ ಹೆಗ್ಗಡಯವರನ್ನು ಆಮಂತ್ರಿಸಿ ಆಶೀರ್ವಾದ ಪಡೆದರು. 
 ರಜತರಂಗ ಸರಣಿ ಅಂಗವಾಗಿ ಒಂದಿಡೀ ವರ್ಷ ನಡೆದ ಕಾರ್ಯಕ್ರಮಗಳ ಕುರಿತು ಖಾವಂದರು ಶ್ಲಾಘನೆ ವ್ಯಕ್ತಪಡಿಸಿದರು. ಯಕ್ಷಲೋಕಕ್ಕೆ ನೂತನ ಜನಾಂಗವನ್ನು ಕರೆತರುವಲ್ಲಿ ಸೃಜನಾತ್ಮಕ ಕೊಡುಗೆ ನೀಡುವಲ್ಲಿ ಇಂಥಾ ಕಾರ್ಯಗಳು ಇತರರಿಗೆ ಮಾದರಿ ಎಂದು ನುಡಿದರು.
ಈ ಸಂದರ್ಭದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ                            
ರಜತರಂಗ ಸಮಿತಿ ಅಧ್ಯಕ್ಷ ಡಾ.ಹರಿಕಿರಣ ಬಂಗೇರ ಪದಾಧಿಕಾರಿಗಳಾದ ಕಿಶೋರ್ ಕುಮಾರ್ ಕೂಡ್ಲು, ಅರ್ಜುನ್ ಕೂಡ್ಲು ಮತ್ತು ಶೇಣಿ ವೇಣುಗೋಪಾಲ ಭಟ್ ಉಪಸ್ಥಿತರಿದ್ದರು.. 

Comments