ಗಾಂಧಿ ಜಯಂತಿ ಪ್ರಯುಕ್ತ ಪೆರ್ಲದಲ್ಲಿ "ಸ್ವಚ್ಛತಾ ಹಿ ಸೇವಾ" ಮೆಗಾ ಸ್ವಚ್ಛತಾ ಅಭಿಯಾನ*

*ಗಾಂಧಿ ಜಯಂತಿ ಪ್ರಯುಕ್ತ ಪೆರ್ಲದಲ್ಲಿ "ಸ್ವಚ್ಛತಾ ಹಿ ಸೇವಾ" ಮೆಗಾ ಸ್ವಚ್ಛತಾ ಅಭಿಯಾನ*
 ಗಾಂಧಿ ಜಯಂತಿಯ ಪ್ರಯುಕ್ತ ಎಣ್ಮಕಜೆ ಗ್ರಾಮ ಪಂಚಾಯತ್, ಫ್ಯಾಮಿಲಿ ಹೆಲ್ತ್ ಸೆಂಟರ್, ಪೆರ್ಲ ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು, ಪೆರ್ಲ ಇದರ  ಎನ್.ಎಸ್.ಎಸ್. ಘಟಕದ ವತಿಯಿಂದ "ಸ್ವಚ್ಛತಾ ಹಿ ಸೇವಾ" ಘೋಷವಾಕ್ಯದಡಿ ಪೆರ್ಲ ಪೇಟೆಯ ಹೃದಯ ಭಾಗದಲ್ಲಿರುವ ಸ್ನೇಹಾರಾಮ ಮಿನಿ ಗಾರ್ಡನ್ ನಲ್ಲಿ ಮೆಗಾ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ಅವರು ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಆಯಿಷಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, "ಸ್ವಚ್ಛತೆಯು ದೈವಭಕ್ತಿಗೆ ಸಮಾನ. ಮಹಾತ್ಮ ಗಾಂಧೀಜಿಯವರು ಕಂಡ ಕನಸಿನ ಸ್ವಚ್ಛ ಭಾರತವನ್ನು ನನಸಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪೆರ್ಲ ಪಟ್ಟಣವನ್ನು ಸ್ವಚ್ಛ ಮತ್ತು ಹಸಿರು ಪಟ್ಟಣವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿ" ಎಂದು ಕರೆ ನೀಡಿದರು. ಅಲ್ಲದೆ ಪೆರ್ಲ ಪೇಟೆಯಲ್ಲಿ ಸ್ವಚ್ಛತಾ ಜಾಥಾ ನಡೆಸಲಾಯಿತು. 

ಕಾರ್ಯಕ್ರಮದಲ್ಲಿ ಪೆರ್ಲ ಹೆಲ್ತ್ ಸೆಂಟರ್ ನ ಆರೋಗ್ಯ ನಿರೀಕ್ಷಕರು, ಪಂಚಾಯತ್ ಸದಸ್ಯರು ಮತ್ತು  ನಾಲಂದ ಕಾಲೇಜಿನ ಉಪ ಪ್ರಾಂಶುಪಾಲರಾದ ಶಂಕರ ಖಂಡಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಉಪನ್ಯಾಸಕರು, ಹರಿತ ಕರ್ಮಸೇನಾ ಸಿಬ್ಬಂದಿಗಳು, ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದು ಸ್ನೇಹಾರಾಮ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.
ಕೊನೆಯಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿ ವರ್ಷಿತ್ ಕೆ ವಂದನಾರ್ಪಣೆ ಸಲ್ಲಿಸಿದರು.

Comments