"ಚಿಕ್ಕ ಚುಟುಕು ದೊಡ್ಡ ಸ್ಥಾನ ಪಡೆದಿದೆ" ಪ್ರೊ.ಮೂಡಿತ್ತಾಯ.‌

*ಚಿಕ್ಕ ಚುಟುಕು ದೊಡ್ಡ ಸ್ಥಾನ ಪಡೆದಿದೆ* ಪ್ರೊಫೆಸರ್ ಮೂಡಿತ್ತಾಯ.

ಇತ್ತೀಚಿನ ದಿನಗಳಲ್ಲಿ ಚುಟುಕುಗಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ಅದಕ್ಕೆ ಈಗಾಗಲೇ ಜನ ಮನ್ನಣೆ ದೊರಕಿದೆ ಎಂದು ಖ್ಯಾತ ವಾಗ್ಮಿ, ಬರಹಗಾರ ಮತ್ತು ವಿಶ್ರಾಂತ ಪ್ರಾಧ್ಯಾಪಕ ಪ್ರೊಫೆಸರ್ ನಾರಾಯಣ ಮೂಡಿತ್ತಾಯ ಅಭಿಪ್ರಾಯ ಪಟ್ಟರು.
    ಅವರು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಾಹಿತ್ಯ ಕ್ಷೇತ್ರದಲ್ಲಿ ಚುಟುಕಿನ ಪ್ರಾಧಾನ್ಯತೆ 
ಎಂಬ ವಿಷಯದಲ್ಲಿ ವರ್ಚ್ಯವಲ್ ವೇದಿಕೆಯಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಚುಟುಕುಗಳು ತಮ್ಮ ಧ್ವನಿಯಿಂದ ಓದುಗರನ್ನು ಬಹಳ ಬೇಗನೆ ತನ್ನೆಡೆಗೆ ಆಕರ್ಷಿಸಿಸುತ್ತದೆ ಆದ್ದರಿಂದಲೇ ಕವಿಗಳು ಸತ್ವ ಭರಿತ ಗಟ್ಟಿ ಚುಟುಕಗಳನ್ನು ಬರೆಯಬೇಕೆಂದು ಕಿವಿಮಾತು ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕುಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ ಸುರೇಶ ನೆಗಳಗುಳಿ ವಹಿಸಿದ್ದರು. ಕೇಂದ್ರ ಚುಸಾಪ ಪ್ರಧಾನ ಸಂಚಾಲಕರಾದ ಡಾ ಎಮ್.ಜಿ.ಆರ್.ಅರಸ್ ಮತ್ತು ಗೌರಾವಾಧ್ಯಕ್ಷರಾದ ಶ್ರೀ ಇರಾ ನೇಮು ಪೂಜಾರಿ ಅವರು ಶುಭ ಹಾರೈಸಿದರು.
 ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ,ಮಂಗಳೂರು ತಾಲೂಕು ಚುಪಾಲ್ಗೊಂಡಿದ್ದವು ಅಧ್ಯಕ್ಷ ರೇಮಂಡ್ ತಾಕೊಡೆ ಅವರು ವಂದಿಸಿದರು.ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.

   ಮಂಗಳೂರು ತಾಲೂಕಿನ ಚುಸಾಪ ಅಧ್ಯಕ್ಷ  ಕಾವೀ ಕೃಷ್ಣ ದಾಸ್,ಪ್ರೊಫೆಸರ್ ಕೃಷ್ಣ ಮೂರ್ತಿ, ಅರೆಹೊಳೆ ಸದಾಶಿವ ರಾವ್,ಶ್ರೀಮತಿ ಮೀನಾಕ್ಷಿ ರಾಮಚಂದ್ರನ್, ಮಹೇಶ್ ಆರ್ ನಾಯಕ್,ಶ್ರೀ ಶೇಖರ್ ಶೆಟ್ಟಿ ಬಾಯಾರ್,ಶ್ರೀ ದಾಮೋದರ ಶೆಟ್ಟಿ, ಶ್ರೀ ಸುಬ್ರಾಯ ಭಟ್,ಸುಧಾ ನಾಗೇಶ್ ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments