*ಕೋಳಿಕ್ಕಾಲು ಕ್ಷೇತ್ರ : ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ*

ಕೋಳಿಕ್ಕಾಲು ಕ್ಷೇತ್ರ : ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಳ್ಳೆರಿಯ : ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವ ಇದೇ ಬರುವ ಮಾರ್ಚ್ 1ರಿಂದ 6ರ ತನಕ ನಡೆಯಲಿರುವುದು. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಕ್ಷೇತ್ರದಲ್ಲಿ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಅಗಲ್ಪಾಡಿ ಮಧುಸೂಧನ ಆಯರ್ ಮಂಗಳೂರು ಅವರು, ಸೇರಿದ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ನೂರಾರು ಭಗವದ್ಭಕ್ತರು ಸಾಕ್ಷ್ಯ ವಹಿಸಿದ ಈ ಕಾರ್ಯಕ್ರಮಕ್ಕೆ ಸೇವಾ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಮಣಿಯಾಣಿ ಕೋಳಿಕ್ಕಾಲು, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ವತ್ಸ ನೆಕ್ರಾಜೆ, ಆರ್ಥಿಕ ಸಮಿತಿ ಅಧ್ಯಕ್ಷರಾದ ರಾಜೇಶ್ ಮಜಕಾರು, ವಿನೋದ್ ಕೊಟ್ಟಂಗುಳಿ ಮೊದಲಾದವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿಧಿ ಸಂಗ್ರಹಣೆ ಕಾರ್ಯಕ್ರಮವೂ ಜರಗಿತು. ನಿಧಿ ಸಂಗ್ರಹಣೆಯ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಧುಸೂದನ ಆಯಾರ್ ಕೋಶಾಧಿಕಾರಿ ಗಣೇಶ ವತ್ಸ ಅವರಿಗೆ ನೀಡುವುದರ ಮೂಲಕ ಚಾಲನೆಗೈದರು. ರಾಜೇಶ್ ಮಜಕಾರು, ಚಂದ್ರಶೇಖರನ್ ಹಾಗೂ ರೋಹಿಣಿ ಚಂದ್ರನ್ ಕಾನಕೋಡು ಮೊದಲಾದವರು ನಿಧಿ ಸಂಗ್ರಹಣೆಯಲ್ಲಿ ಕೈಜೋಡಿಸಿದರು. ಮುದ್ರಣ ಸಮಿತಿ ಅಧ್ಯಕ್ಷರಾದ  ಹರ್ಷ ಕುಮಾರ್ ರೈ ಸ್ವಾಗತಿಸಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ  ನಾರಾಯಣ ಐ ಕಾನಕ್ಕೋಡು ಧನ್ಯವಾದವನ್ನಿತ್ತರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ದೇವಾನಂದ ಶೆಟ್ಟಿ ಕಾನಕೋಡು ಕಾರ್ಯಕ್ರಮವನ್ನು ನಿರೂಪಿಸಿದರು.

Comments