- Get link
- X
- Other Apps
- Get link
- X
- Other Apps
ಎಡನೀರು ಗೋಪಾಲಕೃಷ್ಣ ಅವರು ಸೇವಾ ನಿವೃತ್ತಿ
ಸರ್ಕಾರದ ವಿವಿಧ ವಿಭಾಗಗಳಲ್ಲಿ 35 ವರ್ಷಗಳ ಸುಧೀರ್ಘ ಅವಧಿಯ ಸೇವೆ ಪೂರೈಸಿದ, ರಾಜ್ಯ ಸಚಿವಾಲಯದ ಸೈನಿಕ ಕ್ಷೇಮ ಕಾರ್ಯದರ್ಶಿ ಎಡನೀರು ಗೋಪಾಲಕೃಷ್ಣ ಅವರು ಮೇ.31 ರಂದು ಸೇವಾ ನಿವೃತ್ತಿಹೊಂದಿದರು.1993 ರಲ್ಲಿ ಉಪಜಿಲ್ಲಾಧಿಕಾರಿಗಳಾಗಿ ಕಾಸರಗೋಡು ಜಿಲ್ಲೆಗೆ ನಿಯುಕ್ತರಾದ ಅವರು ಬಳಿಕ ತ್ರಿಶೂರ್ ಜಿಲ್ಲೆಗೆ ಉಪಜಿಲ್ಲಾಧಿಕಾರಿಗಳಾದರು. 2003ರಲ್ಲಿ ಐ.ಎ.ಎಸ್. ಪದೋನ್ನತಿ ಪಡೆದ ಗೋಪಾಲಕೃಷ್ಣ ಅವರು ಕಾಲೇಜು ಶಿಕ್ಷಣ ನಿರ್ದೇಶಕರಾದರು. ಬಳಿಕ ವಯನಾಡ್ ಜಿಲ್ಲಾಧಿಕಾರಿ, ರಿಜಿಸ್ಟಾರ್ ಆಫ್ ಕೋಪರೇಟಿವ್, ಸಾರ್ವಜನಿಕ ಆಡಳಿತ ಇಲಾಖೆಯ ನಿರ್ದೇಶಕ, ಪ.ಜಾತಿ (ಎಸ್.ಸಿ) ಇಲಾಖೆಯ ನಿರ್ದೇಶಕ ಹಾಗೂ ಆ ಬಳಿಕ ವಿದ್ಯಾಭ್ಯಾಸ ಇಲಾಖೆಯ ಕಾರ್ಯದರ್ಶಿ ಮತ್ತು ಸೈನಿಕ ಕ್ಷೇಮ ಇಲಾಖೆಯ ಕಾರ್ಯದರ್ಶಿಗಳಾಗಿ ಇದೀಗ ನಿವೃತ್ತರಾದರು. ಎಡನೀರು ಸ್ವಾಮೀಜೀಸ್ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ವಿದ್ಯಾರ್ಜನೆಗೈದ ಗೋಪಾಲಕೃಷ್ಣ ಅವರು ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪದವಿ ಮತ್ತು ಕಲ್ಲಿಕ್ಕೋಟೆ ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಪತ್ನಿ ಗೀತಾ ಹಾಗೂ ಮೂವರು ಪುತ್ರಿಯರ ಸಮೃದ್ದ ಕುಟುಂಬ ಇವರದು.
ನೇರ ದಿಟ್ಟ ಆಡಳಿತ ಶೈಲಿಯ ಗೋಪಾಲಕೃಷ್ಣ ಅವರ ಸೇವಾ ತತ್ಪರತೆ ಹೆಚ್ಚು ಜನಪ್ರಿಯವಾಗಿತ್ತು. ತಮ್ಮ ಸೇವಾವಧಿಯ ಬಹುತೇಕ ವರ್ಷಗಳನ್ನು ಕೇರಳದ ವಿವಿಧ ಜಿಲ್ಲೆಗಳಲ್ಲಿ ಪೂರೈಸಿದ್ದರೂ, ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಒಲವುಳ್ಳವರಾಗಿ ಜಿಲ್ಲೆಯ ಸಮಗ್ರ ಚಟುವಟಿಕೆಗಳಿಗೆ ನೆರವಾಗಿರುತ್ತಿದ್ದರು.
- Get link
- X
- Other Apps
Comments
Post a Comment