- Get link
- X
- Other Apps
- Get link
- X
- Other Apps
ವಿದ್ಯಾರ್ಥಿಗಳಿಗಾಗಿ ವೆಬಿನಾರ್
ಕಾಸರಗೋಡು, ಜೂ.26: ಕಾಸರಗೋಡು ಜಿಲ್ಲೆಯ ಹೈಯರ್ ಸೆಕೆಂಡರಿ ವಿಭಾಗ ವಿದ್ಯಾರ್ಥಿಗಳಿಗಾಗಿ ವೆಬಿನಾರ್ ಜರುಗಿತು.
ಅಂತಾರಾಷ್ಟ್ರೀಯ ಮಾದಕ ಪದಾರ್ಥ ವ್ಯಸನ ವಿರುದ್ಧ ದಿನಾಚರಣೆ ಅಂಗವಾಗಿ ಶನಿವಾರ "ಅರಿವು ಹಂಚಿ, ಜೀವ ರಕ್ಷಿಸಿ" ಎಂಬ ಸಂದೇಶದೊಂದಿಗೆ ವೆಬಿನಾರ್ ನಡೆಯಿತು.
ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ, ಎಸ್.ಎಸ್.ಸಿ.ಆರ್.ಟಿ. ಜಂಟಿ ವತಿಯಿಂದ ಕಾರ್ಯಕ್ರಮವಿತ್ತು. ಎಸ್.ಎಸ್.ಸಿ.ಆರ್.ಟಿ. ಕೇರಳ ನಿರ್ದೇಶಕ ಡಾ.ಜೆ.ಪ್ರಸಾದ್ ಉದ್ಘಾಟಿಸಿದರು. ರಾಜ್ಯ ಆರ್.ಕೆ.ಎಸ್.ಕೆ. ನೋಡೆಲ್ ಅಧಿಕಾರಿ(ಅಡೋಲಸನ್ಸ್ ಹೆಲ್ತ್) ಡಾ.ಅಮರ್ ಫೆಟ್ಟಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ರಾಜನ್ ಕೆ.ಆರ್.ಪ್ರಧಾನ ಭಾಷಣ ಮಾಡಿದರು. ವಿವಿಧ ವಿಷಯಗಳಲ್ಲಿ ಪರಿಣತರಾದ ಡಾ.ಲಿಂಜೋ ಸಿ.ಜೆ., ಚಾಲ್ಸ್ ಜೋಸ್ ತರಗತಿ ನಡೆಸಿದರು. ಪಿಯರ್ ಎಜುಕೇಟರ್ ದೇವದತ್ ಪ್ರತಿಜ್ಞೆ ಪಠಿಸಿದರು.
ಎಸ್.ಎಸ್.ಸಿ.ಆರ್.ಟಿ. ಕೇರಳ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಮೀನಾ ಸ್ವಾಗತಿಸಿದರು. ಕೆರಿಯರ್ ಗೈಡೆನ್ಸ್ & ಅಡೋಲಸನ್ಸ್ ಕೌನ್ಸಿಲಿಂಗ್ ಸೆಂಟರ್ ಜಿಲ್ಲಾ ಸಂಚಾಲಕಿ ಪುಷ್ಪಲತಾ ಪಿ. ವಂದಿಸಿದರು. ಆರ್.ಬಿ.ಎಸ್. ಸಂಚಾಲಕಿ ಅನು ಅರವಿಂದ್, ಕೌಮಾರ್ ಆರೋಗ್ಯ ಕೌನ್ಸಿಲರ್ ಪ್ರಿತೀಷ್ ಮೋನ್ ನೇತೃತ್ವ ವಹಿಸಿದ್ದರು. ....
- Get link
- X
- Other Apps
Comments
Post a Comment