ಕುಂಡಂಕುಳಿ ಸರಕಾರಿ ಆಶ್ರಮ ಶಾಲೆಯಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಅರ್ಜಿ ಕೋರಿಕೆ

ಕುಂಡಂಕುಳಿ ಸರಕಾರಿ ಆಶ್ರಮ ಶಾಲೆಯಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಅರ್ಜಿ ಕೋರಿಕೆ 
ಕಾಸರಗೋಡು, ಜೂ.1: ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಕುಂಡಂಕುಳಿ ಸರಕಾರಿ ಆಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಅರ್ಜಿ ಕೋರಲಾಗಿದೆ. ಅರ್ಜಿದಾರರ ಕುಟುಂಬ ವಾರ್ಷಿಕ ಆದಾಯ ಒಂದು ಲಕ್ಷ ರೂ. ಮೀರಬಾರದು. ಕೊರಗ ಜನಾಂಗದವರಿಗೆ ಆದಾಯ ಮಿತಿ ಅನ್ವಯವಲ್ಲ. ಜಾತಿ, ಆದಾಯ, ವಯಸ್ಸು, ಆಧಾರ್ ಕಾರ್ಡ್ನ ನಕಲು, ವಿದ್ಯಾರ್ಥಿಯ ತಂದೆ ಯಾ ತಾಯಿ ಕೇಂದ್ರ-ರಾಜ್ಯ-ಸಾರ್ವಜನಿಕ ಸಂಸ್ಥೆಗಳ ಸಿಬ್ಬಂದಿಯಲ್ಲ ಎಂದು ಖಚಿತಪಡಿಸುವ ಸ್ವಯಂ ದೃಡೀಕೃತ ಪತ್ರ (ಸತ್ಯವಾಙ್ಮೂಮೂಲ) ಸಹಿತ ಅರ್ಜಿಯನ್ನು ಜೂ.15ರ ಮುಂಚಿತವಾಗಿgovtashramschool@gmail.com, ksdtdo@gmail.comಎಂಬ ಈ-ಮೇಲ್ ವಿಳಾಸಕ್ಕೆ ಯಾ ಅಂಚೆ ಮೂಲಕ ಸಲ್ಲಿಸಬೇಕು. 
                            2,3,4 ತರಗತಿಗಳ ಪ್ರವೇಶಾತಿಗೆ ಕೊರಗ, ಮಾವಿಲನ್, ಮಲವೇಟ್ಟುವನ್, ಮರಾಟಿ ಜನಾಂಗದ ವಿದ್ಯಾರ್ರತಿಗಳು ಜೂ.15ರ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ : 04994-255466. 

Comments