.http://pass.bsafe.kerala.gov.in/ಎಂಬ ವೆಬ್ ಸೈಟ್ ಮೂಲಕ ಈ ಪಾಸ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

TRAVEL PASS PROVIDE FOR 2006 PEOPLE
2006 ಮಂದಿಗೆ ಪಾಸ್ ಮಂಜೂರು 

ಕಾಸರಗೋಡು, ಮೇ 14: ಲಾಕ್ ಡೌನ್ ಅವಧಿಯಲ್ಲಿ ತುರ್ತು ಕಾರಣಗಳಿಗೆ ಪ್ರಯಾಣ ನಡೆಸುವ ನಿಟ್ಟಿನಲ್ಲಿ ಪೊಲೀಸರಿಗೆ ಸಲ್ಲಿಸಲಾದ ಅರ್ಜಿಗಳಲ್ಲಿ ಈ ವರೆಗೆ ಒಟ್ಟು 2006 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. 
                              ಈ ವರೆಗೆ ಒಟ್ಟು 11812 ಮಂದಿ ಪಾಸ್ ಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅನಿವಾರ್ಯ ಸೇವೆ ವಿಭಾಗದಲ್ಲಿ ಸೇರಿರುವ ಕಚೇರಿ ಗುರುತುಚೀಟಿ ಹೊಂದದೇ ಇರುವ ಮನೆಯ ಕೆಲಸದಾಳುಗಳು, ಕೂಲಿ ಕಾರ್ಮಿಕರು, ಹೋಂ ನರ್ಸ್ ಗಳು ಸಹಿತ ಮಮದಿ ಪಾಸ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅತಿ ತುರ್ತು ಸಂದರ್ಭಗಳಲ್ಲಿ ಜಿಲ್ಲೆಯಿಮದ ಹೊರಗಿನ ಪ್ರದೇಶಗಳಿಗೆ ತೆರಳಬೇಕಿದ್ದರೆ ಈ ಪಾಸ್ ಅನಿವಾರ್ಯವಾಗಿದೆ. ನಿಕ ಸಂಬಂಧಿಯ ಮರಣ, ವಿವಾಹ, ಅಸೌಖ್ಯದಿಂದ ಬಳಲುತ್ತಿರುವ ನಿಕಟ ಸಂಬಂದಿಯ ಸಂದರ್ಶನ ರೋಗಿಯನ್ನು ಒಂದೆಡೆಯಿಂದ ಇನ್ನೊಮದೆಡೆಗೆ ಚಿಕಿತ್ಸೆಗಾಗಿ ಕರೆದೊಯ್ಯವಿಕೆ ಇತ್ಯಾದಿ ಕಾರಣಗಳಿಗೆ ಮಾತ್ರ ಪ್ರಯಾಣ ನಡೆಸಬಹುದಾಗಿದೆ.http://pass.bsafe.kerala.gov.in/ಎಂಬ ವೆಬ್ ಸೈಟ್ ಮೂಲಕ ಈ ಪಾಸ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
 ಕೇರಳ ಪೊಲೀಸ್ ನ ಅಧಿಕೃತ ಮೊಬೈಲ್ ಆಪ್ ಆಗಿರುವ ಪೋಲ್ ಆಪ್ ನಿಂದ ಡೌನ್ ಲೋಡ್ ನಡೆಸಿ ಪಾಸ್ ಗೆ ಅರ್ಜಿ ಸಲ್ಲಿಸಬಹುದು.

ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel

Comments