- Get link
- X
- Other Apps
- Get link
- X
- Other Apps
ಕುಂಬ್ಡಾಜೆ ಮೇ 16 : ಏತಡ್ಕ ಪರಿಸರದಲ್ಲಿ ರಾತ್ರಿ ಕಾಲದಲ್ಲಿ ಬಂದು ನಾಯಿಗಳಿಗೆ ಆಕ್ರಮಣ ನಡೆಸುತ್ತಿರುವ ಅಪರಿಚಿತ ಪ್ರಾಣಿ ಜನರಲ್ಲಿ ಭೀತಿ ಸೃಷ್ಟಿಸಿದೆ. ಕೆಲವು ದಿನಗಳಿಂದ ಸತತವಾಗಿ ಈ ಪ್ರದೇಶದಲ್ಲಿ ನಾಯಿಗಳ ಮೇಲೆ ದಾಳಿ ಮಾಡುತ್ತಿರುವ ಪ್ರಾಣಿ ಏತಡ್ಕ ಸಮೀಪದ ಪಳ್ಳಿತ್ತಡ್ಕ ಉಮೇಶರವರ ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನೂ ಆಕ್ರಮಿಸಿದೆ. ಮನೆಮಂದಿ ಭಯಭೀತರಾಗಿದ್ದಾರೆ. ಉಮೇಶರವರ ಮನೆಗೆ ಇಂದು ಕುಂಬ್ಡಾಜೆ ಪಂಚಾಯತಿನ ಬಿಜೆಪಿ ನಿಯೋಗ ಬೇಟಿ ನೀಡಿತು. ಪಕ್ಷದ ಪಂಚಾಯತು ಸಮಿತಿ ಅಧ್ಯಕ್ಷರಾದ ರವೀಂದ್ರ ರೈ ಗೋಸಾಡ, ಉಪಾಧ್ಯಕ್ಷ ರಾದ ವೈ ಕೆ ಗಣಪತಿ ಭಟ್, ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಶೀಧರ ತೆಕ್ಕೇಮೂಲೆ, ನೇತಾರರಾದ ಸಂತೋಷ್ ರೈ ಪುತ್ರಕಳ, ಯೋಗೀಶ್ ನೇರಪ್ಪಾಡಿ, ಪ್ರಜೀಶ್ ಮುನಿಯೂರು, ಯುವಮೋರ್ಚಾ ಪಂಚಾಯತು ಅಧ್ಯಕ್ಷರಾದ ಪ್ರಮೋದ್ ಭಂಡಾರಿ ಮೊದಲಾದವರು ತಂಡದಲ್ಲಿದ್ದರು.
- Get link
- X
- Other Apps
Comments
Post a Comment