ಕಾಸರಗೋಡು ಜಿಲ್ಲೆಯಲ್ಲಿ 766 ಮಂದಿಗೆ ಕೋವಿಡ್ ಪಾಸಿಟಿವ್: 994 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು, ಮೇ 9: ಕಾಸರಗೋಡು ಜಿಲ್ಲೆಯಲ್ಲಿ 766 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 994 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ 19282 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 18400 ಮಂದಿ ಮನೆಗಳಲ್ಲಿ, 882 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 1988 ಮಂದಿ ನಿಗಾ ಪ್ರವೇಶಿಸಿದ್ದಾರೆ. 1216 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 5455 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1950 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 56698 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಈ ವರೆಗೆ ಒಟ್ಟು 40919 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸದ್ರಿ 15366 ಮಂದಿ ಕೋವಿಡ್ ಚಿಕಿತ್ಸೆಯಲ್ಲಿದ್ದಾರೆ.
Comments
Post a Comment