ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 739 ಮಂದಿಗೆ ಕೋವಿಡ್ ಪಾಸಿಟಿವ್ : 2829 ಮಂದಿಗೆ ಕೋವಿಡ್ ನೆಗೆಟಿವ್


ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 739 ಮಂದಿಗೆ ಕೋವಿಡ್ ಪಾಸಿಟಿವ್ : 2829 ಮಂದಿಗೆ ಕೋವಿಡ್ ನೆಗೆಟಿವ್ 

ಕಾಸರಗೋಡು, ಮೇ 18: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 739 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 2829 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. 
                           ನಿಗಾ 
                            ಕಾಸರಗೋಡು ಜಿಲ್ಲೆಯಲ್ಲಿ 32225 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 31287 ಮಂದಿ, ಸಾಂಸ್ಥಿಕವಾಗಿ 938 ಮಂದಿ ನಿಗಾದಲ್ಲಿರುವರು. ನೂತನವಾಗಿ 2009 ಮಂದಿ ನಿಗಾ ಪ್ರವೇಶಿಸಿದ್ದಾರೆ. 395 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 2825 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1050 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 
                           ಒಟ್ಟು ಗಣನೆ 
                               ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 64267 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ವರೆಗೆ ಒಟ್ಟು 53564 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸದ್ರಿ 10240 ಮಂದಿ ಕೋವಿಡ್ ಚಿಕಿತ್ಸೆಯಲ್ಲಿದ್ದಾರೆ. ಟೆಸ್ಟ್ ಪಾಸಿಟಿವಿಟಿ ರೇಟ್ 23 ಆಗಿದೆ. 
......

Comments