- Get link
- X
- Other Apps
- Get link
- X
- Other Apps
ಹೆದರುವುದು ಬೇಡ, ಆತ್ಮಸ್ಥೈರ್ಯದಿಂದಿರಿ; ಕೊರೊನಾ ಗೆದ್ದು ಬಂದ ಒಂದೇ ಕುಟುಂಬದ 17 ಮಂದಿ
ಮೈಸೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅದೆಷ್ಟೋ ಜನ ಕೊರೊನಾ ಸೋಂಕಿಗೆ ಹೆದರಿದ್ದಾರೆ. ಹೀಗಿರುವಾಗ ಕೊರೊನಾ ಸೋಂಕಿನಿಂದ ಗೆದ್ದು ಬಂದ 17 ಜನರ ಅವಿಭಕ್ತ ಕುಟುಂಬ ಜನರಿಗೆ ಧೈರ್ಯ ತುಂಬುತ್ತಿದೆ.
ಕೊರೊನಾ ಸೋಂಕಿಗೆ ಹೆದರಬೇಡಿ ಎಂದು ಧೈರ್ಯ ಹೇಳಿದೆ.ಕಳೆದ ತಿಂಗಳ 24 ರಂದು ಜಿಲ್ಲೆಯ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿರುವ ರೈತ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ಅವರ ಸಹೋದರ ಲಿಂಗರಾಜೇಗೌಡ ಎಂಬುವರಿಗೆ ಪಾಸಿಟಿವ್ ವರದಿ ದಾಖಲಾಗಿತ್ತು.
ತದನಂತರ ಪರೀಕ್ಷೆಗೆ ಒಳಪಟ್ಟ ಕುಟುಂಬದ 17 ಮಂದಿಗೂ ಕೊರೊನಾ ಸೋಂಕು ತಗುಲಿತ್ತು. ಆ ಬಳಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಲೀಂ ಪಾಷಾ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವೈದ್ಯರ ತಂಡ ಮನೆಯವರಿಗೆ ಆತ್ಮಸ್ಥೈರ್ಯ ತುಂಬಿತ್ತು. ಪ್ರತಿದಿನವೂ ಕೂಡಾ ವೈದ್ಯರು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು.
ವಾಸದ ಮನೆಯಲ್ಲೇ ಹೋಮ್ ಐಸೋಲೇಷನ್ ಮಾಡಲಾಗಿತ್ತು. ಇದೀಗ ಹದಿನೇಳು ಮಂದಿಯೂ ಮಹಾಮಾರಿ ಕೊರೊನಾದಿಂದ ಗೆದ್ದು ಬಂದಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಕೂಡಲೇ ಭಯ ಪಡುವುದು ಬೇಡ. ಆತ್ಮಸ್ಥೈರ್ಯದಿಂದ ಎದುರಿಸಿದರೆ ಕೊರೊನಾದಿಂದ ಮುಕ್ತರಾಗಬಹುದು ಎಂದು ಕುಟುಂಬದ ಸದಸ್ಯರು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ
- Get link
- X
- Other Apps
Comments
Post a Comment