- Get link
- X
- Other Apps
- Get link
- X
- Other Apps
CAMPCO ಇನ್ ಸೇವಾ ವತಿಯಿಂದ ಕೊಂಡೆವೂರು ಗೋಶಾಲೆಗೆ ದೇಣಿಗೆ
“CAMPCO ಇನ್ ಸೇವಾ” ವತಿಯಿಂದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ “ಕಾಮಧೇನು ಗೋಶಾಲೆ”ಯಲ್ಲಿನ ಗೋವುಗಳಿಗೆ ಒಂದು ಲೋಡ್ ಮೇವಿನ ಸಲುವಾಗಿ ದಿ.27/09/2020 ರಂದು ರೂ. 25000/- ದೇಣಿಗೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಗೋವುಗಳಿಗೂ ಗೋಗ್ರಾಸವನ್ನೂ ನೀಡಿದರು. ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸರ್ವದೇವಮಯೀ ಗೋಮಾತೆಯ ಸೇವೆಯಿಂದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ್ ಚೆಟ್ಟಿಯಾರ್, CAMPCO ಉಪಾಧ್ಯಕ್ಷರಾದ ಶಂಕರನಾರಾಯಣ ಖಂಡಿಗೆ, CAMPCO ಇನ್ ಸೇವಾದ ಸದಸ್ಯರಾದ ಪ್ರದೀಪ್, ರಾಘವೇಂದ್ರ ಮತ್ತು ರಮೇಶ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Get link
- X
- Other Apps
Comments
Post a Comment