ಸುಜಿತ್.ಕುಮಾರ್✒️✍️.

ಬೆಳಕು ಸುಜಿತ್.ಕುಮಾರ್✒️✍️.
➖➖➖➖➖➖➖➖
ಇರುಳ ಕಗ್ಗತ್ತಲನು ಎದುರಿಸಿ
ಮೂಡಣದಿ ರವಿಯ ಆಗಮನದಿ ಸುತ್ತೆಲ್ಲಾ ಬೆಳಕಾಯಿತು.
ನೋವನುಂಡು,ಬೆಂದು, ಬಸವಳಿದ ಮನಕೆ ಆಶ್ವಾಸನೆಯ ನುಡಿಗಳು ಬೆಳಕಾಯಿತು.
ಆಟ-ಪಾಠದಿ ಮುಂದಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ,ವೇದಿಕೆಯು ಬೆಳಕಾಯಿತು.
ಬೆವರ ಸುರಿಸಿ,ಶ್ರಮಪಟ್ಟು ದುಡಿವ ರೈತನಿಗೆ ಉತ್ತಮ ಫಲವು ಬೆಳಕಾಯಿತು.
ಬಿಸಿಲ ಬೇಗೆಗೆ ಸುಟ್ಟುಹೋದ ಮರ-ಗಿಡಗಳಿಗೆ ಮಳೆಯೆಂಬ ಬೆಳಕು ಅಸರೆ ಯಾಯಿತು.
ದಣಿದು,ಆಯಾಸವಾದ ಗಂಟಲಿಗೆ ಜಲವೆಂಬ ಅಮೃತ ಬೆಳಕಾಯಿತು.
ಹಸಿದ ಒಡಲಿಗೆ ಅನ್ನವೇ ಬೆಳಕಾಯಿತು.
ಜೀವನದಿ ಸೋತ ಮನಗಳಿಗೆ ಸೋಲೇ ಗೆಲುವಿನ ಪಾಠವಾಯಿತು.
ಶ್ರದ್ಧೆಯಿಂದ ಕಲಿತ ವಿದ್ಯೆಗೆ ಉತ್ತಮ ಉದ್ಯೋಗವು ಬೆಳಕಾಯಿತು.
****************
ಸುಜಿತ್.ಕುಮಾರ್✒️✍️.

Comments