- Get link
- X
- Other Apps
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ 4044 ಮಂದಿ ನಿಗಾದಲ್ಲಿ 2913 ಮಂದಿ ಮನೆಗಳಲ್ಲಿ, 1131 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು
ಕಾಸರಗೋಡು, ಆ.3 : ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 4044 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
2913 ಮಂದಿ ಮನೆಗಳಲ್ಲಿ, 1131 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 301 ಮಂದಿ ಸೋಮವಾರ ನಿಗಾದಲ್ಲಿ ಪ್ರವೇಶಿಸಿದರು. 239 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಈ ವರೆಗೆ 30453 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ನೂತನವಾಗಿ 516 ಮಂದಿಯ ಸ್ಯಾಂಪಲ್ ತಪಾಸಣೆಗೆ ರವಾನೆಗೊಂಡಿದೆ.
51 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 51 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಮಂಜೇಶ್ವರ ಗೋವಿಂದ ಪೈ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 31, ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 1, ವಿದ್ಯಾನಗರ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 1, ಪರವನಡ್ಕ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 1, ಎರ್ನಾಕುಲಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ 1, ಪಡನ್ನಕ್ಕಾಡ್ ಸಿ.ಯು.ಕೆ.ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 13, ಪಾಲತ್ತಡಂ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 3 ಮಂದಿ ಸೋಮವಾರ ಗುಣಮುಖರಾಗಿದ್ದಾರೆ.
- Get link
- X
- Other Apps
Comments
Post a Comment