- Get link
- X
- Other Apps
- Get link
- X
- Other Apps
ಕೋವಿಡ್ ಗೆ ಸಂಬಂಧಪಟ್ಟು ಕೆಲವೆಡೆ ಪ್ರಕಟಗೊಳ್ಳುತ್ತಿರುವ ಹುಸಿ ವಾರ್ತೆ, ಸಂದೇಶಗಳ ವಿರುದ್ಧ ಕ್ರಮ
ವಿಸ್ತೃತಗೊಂಡಿವೆ ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫ್ಯಾಕ್ಟ್ ಚೆಕ್ ವಿಭಾಗ ಚಟುವಟಿಕೆಗಳು
ಕೋವಿಡ್ ಗೆ ಸಂಬಂಧಪಟ್ಟು ಕೆಲವೆಡೆ ಪ್ರಕಟಗೊಳ್ಳುತ್ತಿರುವ ಹುಸಿ ವಾರ್ತೆ, ಸಂದೇಶಗಳನ್ನು ಪತ್ತೆಮಾಡಿ, ಅವುಗಳನ್ನು ಹರಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಮಾಹಿತಿ ಮತ್ತು
P-3
ಸಾರ್ವಜನಿಕ ಸಂಪರ್ಕ ಇಲಾಖೆ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಫ್ಯಾಕ್ಟ್ ಚೆಕ್ ವಿಭಾಗದ ಚಟುವಟಿಕೆಗಳನ್ನು ವಿಸ್ತೃತಗೊಳಿಸಲಾಗಿದೆ.
ಕೋವಿಡ್ ಸೋಂಕು ಸಂಬಂಧ ಸತ್ಯಕ್ಕೆ ದೂರವಾಗಿರುವ ಸುದ್ದಿಗಳು ಮತ್ತು ರಾಜ್ಯ ಸರಕಾರವನ್ನು, ಸಾರ್ವಜನಿಕರನ್ನು ಬಾಧಿಸುವ ರೀತಿಯ ತಪ್ಪು ಮಾಹಿತಿಗಳ ಬಗೆಗಿನ ನಿಗಾ ಇನ್ನು ಮುಂದೆ ಫ್ಯಾಕ್ಟ್ ಚೆಕ್ ಚಟುವಟಿಕೆಗಳ ವ್ಯಾಪ್ತಿಗೆ ಬರಲಿವೆ. ಇಲಾಖೆಯ ಚಟವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ವಾರ್ತಾ ಇಲಾಖೆ ಕಚೇರಿಗಳಲ್ಲಿ ಫ್ಯಾಕ್ಟ್ ಚೆಕ್ ಘಟಕಗಳು ರಚನೆಗೊಳ್ಳಲಿವೆ. ಹೆಚ್ಚುವರಿ ಮಂದಿಗೆ ಮಾಹಿತಿ ತಲಪಿಸುವ ನಿಟ್ಟಿನಲ್ಲಿ ಒಂದು ವೆಬ್ ಪೋರ್ಟಲ್ ಕೂಡಾ ಸಿದ್ಧಗೊಳ್ಳಲಿದೆ. ಸಾರ್ವಜನಿಕರಿಗೆ ಸಂದೇಹ ಉಂಟುಮಾಡುವ ವಾರ್ತೆಗಳನ್ನು, ಮಾಹಿತಿಗಳನ್ನು ಇತ್ಯಾದಿ ಫ್ಯಾಕ್ಟ್ ಚೆಕ್ ವಾಟ್ಸ್ ಆಪ್ ನಂಬ್ರ "9496003234"ಗೆ ರವಾನಿಸಬಹುದು.
ಸಾರ್ವಜನಿಕರು ಈಗಾಗಲೇ ಫ್ಯಾಕ್ಟ್ ಚೆಕ್ ವಿಭಾಗಕ್ಕೆ ವಾಟ್ಸ್ ಆಪ್ ಮೂಲಕ ರವಾನಿಸಿರುವ ಸಂಶಯಕರವಾಗಿರುವ 1635 ಸಂದೇಶ/ ವಾರ್ತೆ ಗಳಲ್ಲಿ 1586 ವಿಚಾರಗಳಿಗೆ ವಾಟ್ಸ್ ಆಪ್ ಅಡ್ಮಿನ್ ಮುಖಾಂತರ ಈಗಾಗಲೇ ಉತ್ತರ ನೀಡಲಾಗಿದೆ. ಹೆಚ್ಚುವರಿ ತನಿಖೆ, ಖಚಿತತೆ ಅಗತ್ಯವಿರುವ, ರಾಜ್ಯ ಸರಕಾರದ, ಸಾರ್ವಜನಿಕ ಬದುಕನ್ನು ತೀವ್ರವಾಗಿ ಬಾಧಿಸುವ 49 ವಿಚಾರಗಳನ್ನು ಫ್ಯಾಕ್ಟ್ ಚೆಕ್ ವಿಭಾಗ ನಿಜಸ್ಥಿತಿ ಪತ್ತೆಮಾಡಿ ಫೇಸ್ ಬುಕ್ ಮೂಲಕ(https://www.facebook.com/IPRDFactkerala/) ಸಾರ್ವಜನಿಕರಿಗೆ ಒದಗಿಸಲಾಗಿದೆ. ಗಂಭೀರ ಸ್ವಭಾವದ 12 ವಿಚಾರಗಳನ್ನು ಕೇರಳ ಪೊಲೀಸ್ ಸೈಬರ್ ಡೋಮಿಗೆ ಹಸ್ತಾಂತರಿಸಲಾಗಿದೆ. #FactCheck#IPRDFactCheck#FackNews#Kerala.
- Get link
- X
- Other Apps
Comments
Post a Comment