ವಿವಾಹ ಸಮಾರಂಭದಲ್ಲಿ ಭಾಗವಹಿಸಿದ 45 ಮಂದಿಗೆ ಕೋವಿಡ್ ಖಚಿತ , ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ

ವಿವಾಹ ಸಮಾರಂಭದಲ್ಲಿ ಭಾಗವಹಿಸಿದ 45 ಮಂದಿಗೆ ಕೋವಿಡ್ ಖಚಿತ , ಆದೇಶ ಉಲ್ಲಂಘಿಸುವವರ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದರು

: ಭಾಗವಹಿಸಿದ್ದ ಎಲ್ಲರೂ ಸ್ವಯಂ ಕ್ವಾರೆಂಟೈನ್ ಗೆ ತೆರಳಬೇಕು: ಜಿಲ್ಲಾಧಿಕಾರಿ  
                                                       ಚೆಂಗಳ ಗ್ರಾಮ ಪಂಚಾಯತ್ ನ ನಾಲ್ಕನೇ ವಾರ್ಡ್ ನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಜು.17ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 43 ಮಂದಿಗೆ ಈಗಾಗಲೇ ಕೋವಿಡ್ 19 ಖಚಿತಗೊಂಡಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ 14 ದಿನಗಳ ಕಾಲ ಸ್ವಯಂ ಕ್ವಾರೆಂಟೈನ್ ನಲ್ಲಿ ಮನೆಗಳಲ್ಲಿ ಇರಬೇಕು ಎಂದೂ, ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 
                              ಈ ಆದೇಶ ಉಲ್ಲಂಘಿಸುವವರ ವಿರುದ್ಧ ಮತ್ತು ಕೋವಿಡ್ ಪ್ರತಿರೋಧ ಸಂಹಿತೆ ಉಲ್ಲಂಘಿಸಿ ಈ ರೀತಿಯ ಸಮಾರಂಭ ನಡೆಸಿದ ವ್ಯಕ್ತಿಯ ವಿರುದ್ಧ ಕೇರಳ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದರು. ಈ ಕ್ರಮದ ಪರಿಣಾಮ ಆರೋಪಿಗಳಿಗೆ 2 ವರ್ಷದ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ಲಭಿಸಬಹುದಾಗಿದೆ ಎಂದು ಅವರು ಹೇಳಿದರು.      
  ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ಈ ಅವಧಿಯಲ್ಲಿ ಸಾರ್ವಜನಿಕರು ನಿಗದಿತ ಸಂಖ್ಯೆಗಿಂತ ಅಧಿಕವಾಗಿ ಸೇರುವ ಸಮಾರಂಭಗಳನ್ನು ಪೂರ್ಣರೂಪದಲ್ಲಿ ಕೈಬಿಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. 

Comments