ಮಾಸ್ಕ್ ಧರಿಸದೇ ಇದ್ದ ಪ್ರಕರಣ: 197 ಮಂದಿ ವಿರುದ್ಧ ಕೇಸು , ಲಾಕ್ ಡೌನ್ ಉಲ್ಲಂಘನೆ: 10 ಕೇಸುಗಳು

ಮಾಸ್ಕ್ ಧರಿಸದೇ ಇದ್ದ ಪ್ರಕರಣ: 197 ಮಂದಿ ವಿರುದ್ಧ ಕೇಸು , ಲಾಕ್ ಡೌನ್ ಉಲ್ಲಂಘನೆ: 10 ಕೇಸುಗಳು 
                                
                                                            ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಜು.21ರಂದು ಕಾಸರಗೋಡು ಜಿಲ್ಲೆಯಲ್ಲಿ 197 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ ಒಟ್ಟು 14061 ಆಗಿದೆ. 
ಲಾಕ್ ಡೌನ್ ಉಲ್ಲಂಘನೆ: 10 ಕೇಸುಗಳು 
                                                                  ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಜು.21ರಂದು ಕಾಸರಗೋಡು ಜಿಲ್ಲೆಯಲ್ಲಿ 10 ಕೇಸುಗಳನ್ನು ದಾಖಲಿಸಲಾಗಿದೆ. 15 ಮಂದಿಯನ್ನು ಬಂಧಿಸಲಾಗಿದ್ದು, 5 ವಾಹನಗಳನ್ನು ವಶಪಡಿಸಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ 2 ಕೇಸುಗಳು, ಬೇಕಲ 2, ಹೊಸದುರ್ಗ 1, ಚಂದೇರ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ.
                                ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ ಒಟ್ಟು 3179 ಆಗಿದೆ. 4217 ಮಂದಿಯನ್ನು ಬಂಧಿಸಲಾಗಿದೆ. 1281 ವಾಹನಗಳನ್ನು ವಶಪಡಿಸಲಾಗಿದೆ. 

Comments