ಖಾದಿ ಬಟ್ಟೆ ಖರೀದಿ ವೇಳೆ ಶೇ 10 % ರಿಯಾಯಿತಿ

ಖಾದಿ ಬಟ್ಟೆ ಖರೀದಿ ವೇಳೆ ರಿಯಾಯಿತಿ


ಕೇರಳ ಖಾದಿಗ್ರಾಮ ಉದ್ದಿಮೆ ಮಂಡಳಿ ವ್ಯಾಪ್ತಿಯ ಮಾರಾಟ ಕೇಂದ್ರಗಳಲ್ಲಿ ಖಾದಿ ಬಟ್ಟೆ ಖರೀದಿ ವೇಳೆ ಶೇ 20 ನಾಮಿನಲ್ ರಿಯಾತಿಯಲ್ಲದೆ, ಶೇ 10 ವಿಶೇಷ ರಿಯಾಯಿತಿ ಮಂಜೂರು ಮಾಡಲಾಗಿದೆ ಎಂದು ಪ್ರಾಜೆಕ್ಟ್ ಆಫೀಸರ್ ತಿಳಿಸಿದರು.

                         ಓಣಂ, ಬಕ್ರೀದ್ ಹಬ್ಬಗಳ ಹಿನ್ನೆಲೆಯಲ್ಲಿ ಜು.28ರಿಂದ .30 ವರೆಗೆ ಸೌಲಭ್ಯವಿರುವುದು ಎಂದವರು ಹೇಳಿದರು. ಸರಕಾರಿ, ಅರೆ ಸರಕಾರಿ ಸಿಬ್ಬಂದಿಗೆ ಒಂದು ಲಕ್ಷ ರೂ. ವರೆಗೆ ಕ್ರೆಡಿಟ್ ಸೌಲಭ್ಯ ಇರುವುದು. ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ನಗರ, ಮುಳ್ಳೇರಿಯ, ಕುಂಡಂಕುಳಿ, ಕಾಞಂಗಾಡ್ ಟೌನ್, ರಾಮನಗರ, ನೀಲೇಶ್ವರ, ತ್ರಿಕರಿಪುರ, ಪಾಲಕುನ್ನು, ಮಾಡಕ್ಕರ ಪ್ರದೇಶಗಳ ಮಾರಾಟ ಕೇಂದ್ರಗಳಲ್ಲಿ ಸ್ಪೆಷ್ಯಲ್ ರಿಬೇಟ್ ಲಭ್ಯವಿದೆ ಎಂದು ಅವರು ಹೇಳಿದರು.

Comments