- Get link
- X
- Other Apps
- Get link
- X
- Other Apps
ಖಾಸಗಿ ಆಸ್ಪತ್ರೆಗಳನ್ನು ಆಯುಷ್ಮನ್ ಭರತ್ ಯೋಜನೆಯಲ್ಲಿ ಸೇರಿಸಬೇಕು: ಅಡ್ವ.ಕೆ.ಶ್ರೀಕಾಂತ್
-------------------------------
ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮನ್ ಭರತ್ ಆರೋಗ್ಯ ವಿಮಾ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಅಡ್.ಕೆ.ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಕರೋನಾ ಕೇರ್ ಸೆಂಟರ್ ಆಗಿ ಪರಿವರ್ತಿಸಿದ ಕಾರಣ , ಇತರ ಕಾಯಿಲೆ ಬಂದ ಕೆಳವರ್ಗದ ಹಾಗೂ ಮಧ್ಯಮ ವರ್ಗದವರಿಗೆ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲಾ . ಖಾಸಗಿ ಆಸ್ಪತ್ರೆಯಲ್ಲಿ
ಹೆಚ್ಚಿನ ವೆಚ್ಚ ಭರಿಸಲು ಬಳಲುತ್ತಿರುವ ಸಾಮಾನ್ಯ ರೋಗಿಗಳ ಪರಿಹಾರಕ್ಕಾಗಿ, 5 ಲಕ್ಷದ ವರೆಗಿನ ಚಿಕಿತ್ಸೆ ಉಚಿತವಾಗಿ ಲಭಿಸುವ ಆಯುಷ್ಮನ್ ಭರತ್ ಆರೋಗ್ಯ ವಿಮಾ ಯೋಜನೆಯ ಅನುಕೂಲವನ್ನು ಖಾಸಗಿ ಆಸ್ಪತ್ರೆಯಲ್ಲಿ ಲಭಿಸಿಸುವಂತೆ ಮಾಡಬೇಕು.
ಜಿಲ್ಲೆಯ ಅನೇಕ ಖಾಸಗಿ ಆಸ್ಪತ್ರೆಗಳು ಈ ಸೌಲಭ್ಯವನ್ನು ನೀಡಲು ಸಿದ್ಧರಿದ್ದರೂ, ರಾಜ್ಯ ಸರ್ಕಾರ ಅನುಮತಿ ನೀಡದೇ ಇರುವುದು ವೇದನಜನಕವಾಗಿದೆ.
ಆರೋಗ್ಯ ವ್ಯವಸ್ಥೆಯ ಶೋಚನೀಯ ಅವಸ್ಥೆಯನ್ನು ಪರಿಹರಿಸಲು ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ. ಶ್ರೀಕಾಂತ್ ರಾಜ್ಯ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.
- Get link
- X
- Other Apps
Comments
Post a Comment