- Get link
- X
- Other Apps
ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಪ್ಪರ ಮುಹೂರ್ತ
ಬದಿಯಡ್ಕ: 22 ವರ್ಷಗಳ ನಂತರ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಚಪ್ಪರ ಮುಹೂರ್ತ ಶುಕ್ರವಾರ ಶಾಲಾ ವಠಾರದಲ್ಲಿ ಜರಗಿತು. ಕೊಡುಗೈ ದಾನಿ ಗೋಪಾಲಕೃಷ್ಣ ಪೈ ಬದಿಯಡ್ಕ ನೆರವೇರಿಸುವ ಮೂಲಕ ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಶಾಹಿದಾ, ನೊಂದಾವಣಾ ಸಮಿತಿ ಅಧ್ಯಕ್ಷ ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಎಣ್ಮಕಜೆ ಗ್ರಾಮಪಂಚಾಯಿತಿ ಸದಸ್ಯ ಶರತ್‌ಚಂದ್ರ ಶೆಟ್ಟಿ, ಸಹಾಯಕ ಮುಖ್ಯೋಪಾಧ್ಯಾಯರಾದ ಉಣ್ಣಿಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಆನಂದ ಕೆ. ಮವ್ವಾರು, ಪ್ರೋಗ್ರಾಂ ಕಮಿಟಿಯ ಸಂಚಾಲಕ ಪ್ರಭಾಕರನ್ ನಾಯರ್, ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ, ಅಧ್ಯಾಪಕರಾದ ನಾರಾಯಣ ಆಸ್ರ, ವಿಜಯನ್, ಯಜ್ಞೇಶ್, ಗೋಪಾಲ, ನವೀನ ಹಾಗೂ ವಿವಿಧ ಸಮಿತಿಗಳ ಸದಸ್ಯರು ಪಾಲ್ಗೊಂಡಿದ್ದರು. ಚಪ್ಪರ ಸಮಿತಿ ಸಂಚಾಲಕ ನಾರಾಯಣ ಮಾಸ್ತರ್ ಸ್ವಾಗತಿಸಿ, ಆಹಾರ ಸಮಿತಿ ಸಂಚಾಲಕ ನಿರಂಜನ ಮಾಸ್ತರ್ ವಂದಿಸಿದರು. ಶಾಲಾ ಕಲೋತ್ಸವವು ಅಕ್ಟೋಬರ್ 26, 27, ನವಂಬರ್ 2,3,4ರಂದು ಜರಗಲಿರುವುದು.

Comments
Post a Comment