ಮತ್ತೆ ತೆರೆಯಲಿದೆ.ರಾಣಿಪುರಂ ಪರಿಸರ ಪ್ರವಾಸೋದ್ಯಮ ಕೇಂದ್ರ Fox24live news

ತಾತ್ಕಾಲಿಕವಾಗಿ ಮುಚ್ಚಿರುವ ರಾಣಿಪುರಂ ಪರಿಸರ ಪ್ರವಾಸೋದ್ಯಮ ಕೇಂದ್ರ  (ಮಾರ್ಚ್ 19) ಮತ್ತೆ ತೆರೆಯಲಿದೆ*.
    ತಾತ್ಕಾಲಿಕವಾಗಿ ಮುಚ್ಚಿರುವ ರಾಣಿಪುರಂ ಪ್ರವಾಸೋದ್ಯಮ ಕೇಂದ್ರವನ್ನು  ಮಾರ್ಚ್ 19ರಂದು ಪುನ ತೆರೆಯಲಾಗುವುದು. ನೀರಿನ ಕೊರತೆಯನ್ನು ನೀಗಿಸಿ ಕೇಂದ್ರವನ್ನು ಪುನ ಕಾರ್ಯ ನಿರ್ವಹಿಸಲು ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ ಹಾಗೂ ವಿಭಾಗೀಯ ಅರಣ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಇದರ ಫಲವಾಗಿ ಮಾರ್ಚ್ 19 ಭಾನುವಾರ ದಿಂದ ರಾಣಿಪುರಂ ಪ್ರವಾಸೋದ್ಯಮ ಕೇಂದ್ರವನ್ನು ಪ್ರವಾಸಿಗರಿಗಾಗಿ ತೆರೆದು ಕೊಡಲಾಗುತ್ತದೆ. ಡಿಟಿಪಿಸಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕೌಂಟರ್‌ನಲ್ಲಿ ನೀರು ವಿತರಿಸಲಾಗುವುದು.

Comments