ಅಯ್ಯಪ್ಪ ಮಂದಿರ ನಿರ್ಮಾಣದ ಗುರಿಯೊಂದಿಗೆ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟಿನ ಸದಸ್ಯರು: ಪ್ರಶ್ನೆ ಚಿಂತನೆ

ಬದಿಯಡ್ಕ:ಬದಿಯಡ್ಕದಲ್ಲಿ ಪೇಟೆಗೆ ಹೊಂದಿಕೊಂಡು ನೂತನವಾಗಿ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣದ ಗುರಿಯೊಂದಿಗೆ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟಿನ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರನ್ನೊಳಗೊಂಡ ಅಯ್ಯಪ್ಪ ಭಕ್ತರು ಸ್ಥಳ ಪರಿಶೀಲನೆ ಮಾಡಿದರು.
ಮುಂದುವರಿದ ಭಾಗವಾಗಿ ದೈವಜ್ಞ ಬಾಲಕೃಷ್ಣನ್ ಪೇರಿಯಟಡ್ಕ  ನೇತೃತ್ವದಲ್ಲಿ ಮಂದಿರ ನಿರ್ಮಾಣ ಸ್ಥಳ ಸಾನಿಧ್ಯದಲ್ಲಿ ಪ್ರಶ್ನೆ ಚಿಂತನೆ ನಡೆಯಿತು
ಪ್ರಶ್ನೆ ಚಿಂತನೆಯಲ್ಲಿ ಈ ಸ್ಥಳವು ಮಂದಿರಕ್ಕೆ ಯೋಗ್ಯವೆಂದು ಆದಷ್ಟು ಬೇಗ ಭಕ್ತರ ಸಹಕಾರದೊಂದಿಗೆ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆ ಗೊಳ್ಳಲಿದೆ ಎಂದು ಕಂಡು ಬಂತು. ನರೇಂದ್ರ ಬಿ.ಎನ್. ಕಾರ್ಯದರ್ಶಿಯಾದ ಸುಬ್ರಮಣ್ಯ ಪೈ ಕೋಶಾಧಿಕಾರಿಯಾದ, ಗುರು ಪ್ರಸಾದ್ ಮಾಸ್ತರ್, ಗುರುಸ್ವಾಮಿಗಳು ಮತ್ತು ಭಕ್ತ ವೃಂದದವರು,ಟ್ರಸ್ಟ್ ನ ಎಲ್ಲ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . 

Comments