ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ನಡೋದಿ ಉತ್ಸವ.

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ನಡೋದಿ ಉತ್ಸವ

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ನಡೋದಿ ಉತ್ಸವ ಈ ತಿಂಗಳ 4,5,6 ಎಂಬೀ ದಿನಗಳಲ್ಲಿ ಜರಗಲಿದೆ. 4 ರಂದು ಬೆಳಗ್ಗೆ 8 ಕ್ಕೆ ಮೂಲಸ್ಥಾನ ಆಯತ್ತಾರ್ ಕಲ್ಲಿನಲ್ಲಿ ದೀಪ ಬೆಳಗಿಸಿ ಪ್ರಾರ್ಥನೆ, 9 ಕ್ಕೆ ಕ್ಷೇತ್ರದಲ್ಲಿ ಗಣಪತಿ ಹೋಮ, ರಾತ್ರಿ 7.30 ರಿಂದ ಮರು ದಿವಸ ಸೂರ್ಯೋದಯದ ವರೆಗೆ ಭಂಡಾರ ಮನೆಯಲ್ಲಿ ಶ್ರೀ ದೇವಿಯ ಸ್ತುತಿ ಹಾಡುವುದು, 5 ರಂದು ಬೆಳಗ್ಗೆ 9 ಕ್ಕೆ ಕ್ಷೇತ್ರಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 11 ಕ್ಕೆ ಕಲಶಾಟ್, ಕೊಡಿ ಎಲೆ ಇಡುವುದು, 1  ಕ್ಕೆ ಅನ್ನದಾನ, 6.30 ಕ್ಕೆ ದೀಪಾರಾಧನೆ, ಸರ್ವೈಶ್ವರ್ಯ ದೀಪ ಪೂಜೆ,  ರಾತ್ರಿ 8  ರಿಂದ ಅನ್ನದಾನ, 9 ಕ್ಕೆ ಭಜನೆ, 11.30  ರಿಂದ ಪುಷ್ಪ ಪೂಜೆ,ಆಯಿರತಿರಿ, ನಡೋದಿ ಉತ್ಸವ, ಚಪ್ಪರ ಮದುವೆ, ತುಲಾಭಾರ,  ಮರುದಿನ ಮುಂಜಾನೆ 3 ರಿಂದ ಬಲಿ ಉತ್ಸವ, ಪ್ರಸಾದ ವಿತರಣೆ, ಭಂಡಾರ ನಿರ್ಗಮನ ಇರುವುದು.

Comments