- Get link
- X
- Other Apps
- Get link
- X
- Other Apps
ಇತಿಹಾಸ ಪ್ರಸಿದ್ಧ ಕಾಪಾಡು ಶ್ರೀ ಉದನೇಶ್ವರ ಭಕ್ತಿಗಾನ ಆಲ್ಬಂ ವೀಡಿಯೋಕ್ಕೆ ಚಾಲನೆ
ಬದಿಯಡ್ಕ: ದೇವರ ನಾಮ ಸ್ಮರಣೆಯನ್ನು ನಿರಂತರವಾಗಿಸುವಲ್ಲಿ ಭಕ್ತಿಗೀತೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಆದುದರಿಂದ ಆಲ್ಬಂ ರೂಪದಲ್ಲಿ ಹೊರ ಬರುತ್ತಿರುವ ಈ ಭಕ್ತಿಪೂರ್ಣ ಗಾಯನ ಭಕ್ತ ಜನಮನದಲ್ಲಿ ಸದಾ ಹಸಿರಾಗಿರುವಂತಾಗಲಿ ಎಂದು ಚಂದ್ರಹಾಸ ನಂಬಿಯಾರ್ ಮುನಿಯೂರು ಹೇಳಿದರು. ಅವರು ಕಾಪಾಡು ಶ್ರೀ ಉದನೇಶ್ವರ ಭಕ್ತಿಗಾನ ವೀಡಿಯೋಗೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ,
ಉದನೇಶ್ವರ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ
ಸಂಘಟಕ ನಿರಂಜನ್ ಮಾಸ್ತರ್ ಬದಿಯಡ್ಕ, ಭಕ್ತ ವೃಂದದ ಕಾರ್ಯದರ್ಶಿ ರಾಮ ಬದಿಯಡ್ಕ, ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ ನೆಟ್ಟಣಿಗೆ, ನಿತಿನ್ ಫಾಕ್ಸ್ ಸ್ಟಾರ್, ನಿಶಾಂತ್ ಬದಿಯಡ್ಕ ,ಬಾಲು ಬದಿಯಡ್ಕ ,ದೀಕ್ಷಿತ್ ಕಾಯಿಮಲೆ , ಚರಣ್ ದೀಪ್ ಮೊದಲಾದವರು ಉಪಸ್ಥಿತರಿದ್ದರು. ಭಕ್ತಿಗೀತೆಯ ಸಾಹಿತ್ಯವನ್ನು ಪೆರ್ಮುಖ ಸುಬ್ರಹ್ಮಣ್ಯ ಭಟ್ ರಚಿಸಿದ್ದು ಶಿವಾನಂದ ಉಪ್ಪಳ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಡಿನಾಡ ಕೋಗಿಲೆ ವಸಂತ ಬಾರಡ್ಕ ಮತ್ತು ಮನೀಷ ಕೂಡ್ಲು ಹಾಡಿದ್ದು ಪೆರಡಾಲ ಭಕ್ತ ವೃಂದ ಮತ್ತು ಮಹಿಳಾ ಭಕ್ತವೃಂದ ತಮ್ಮ ಸಹಕಾರ ನೀಡಿದ್ದಾರೆ. ಛಾಯಾಗ್ರಹಣವನ್ನು ಟೀಮ್ ಫೋಕ್ಸ್ ಸ್ಟಾರ್ ನಿರ್ವಹಿಸಲಿದೆ. ಶಿವರಾತ್ರಿಯಂದು ಈ ವೀಡಿಯೋ ಆಲ್ಬಂ ಬಿಡುಗಡೆಗೊಳ್ಳಲಿದೆ.
- Get link
- X
- Other Apps
Comments
Post a Comment