ಪೆರಡಾಲ ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ 40 ನೇ ವಾರ್ಷಿಕೋತ್ಸವ : ಕತ್ತಲ್ ಸಾರ್ ಪೆರಡಾಲ ಕ್ಷೇತ್ರಕ್ಕೆ

ಪೆರಡಾಲ ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ 40 ನೇ ವಾರ್ಷಿಕೋತ್ಸವ : ಕತ್ತಲ್ ಸಾರ್ ಪೆರಡಾಲ ಕ್ಷೇತ್ರಕ್ಕೆ
ಪೆರಡಾಲ ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ 40 ನೇ ವಾರ್ಷಿಕೋತ್ಸವದ ಅಂಗವಾಗಿ 1.3.2022 ಮಂಗಳವಾರ ಮಹಾಶಿವರಾತ್ರಿ ಪುಣ್ಯ ದಿನದಂದು ಪೆರಡಾಲ ಉದನೇಶ್ವರ ದೇವಸ್ಥಾನದ ವಠಾರದಲ್ಲಿ
  ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಬಪ್ಪನಾಡು ಕ್ಷೇತ್ರ ಮಹಾತ್ಮೆ ಮೈಂದ ದ್ವಿವಿದ ಕಾಳಗ  ಎಂಬ ಪೌರಾಣಿಕ ಕಥಾ ಭಾಗವು ಸಮಯ ರಾತ್ರಿ 8ಕ್ಕೆಆಡಿ ತೋರಿಸಲಿರುವರು . 

ಕಾರ್ಯಕ್ರಮದ ಅಂಗವಾಗಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತಿರುಪತಿ ಕುಮಾರ್ ಭಟ್ ಅಧ್ಯಕ್ಷತೆ ವಹಿಸಲಿರುವರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, Dr. ರವೀಶ ಪಡುಮಲೆ , ನಾರಾಯಣ ಮಣಿಯಾಣಿ ,ವೆಂಕಟ್ರಮಣ ಭಟ್ಟ ,ರಾಧಾ ಪಂಜಿತ್ತಡ್ಕ ,ವಸಂತ ಟೈಲರ್ ,ಬದಿಯಡ್ಕ ಚಂದ್ರಶೇಖರ ರೈ ವಳಮಲೆ ಮುಂತಾದವರು ಉಪಸ್ಥಿತರಿರುವರು.

 

Comments