- Get link
- X
- Other Apps
- Get link
- X
- Other Apps
ವರದಿ: FOX24LIVE NEWS CHANNEL
ಮಾನ್ಯ- ಶ್ರೀ ಅಯ್ಯಪ್ಪ ಸೇವಾ ಸಂಘದ 40 ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯನ್ನು ಜರುಗಿತು . ಮಂದಿರದ ಗುರುಸ್ವಾಮಿ ಶ್ರೀ ಕುಞಪ್ಪು ಗುರುಸ್ವಾಮಿ ಯವರ ನೇತ್ರತ್ವದಲ್ಲಿ ಪ್ರಾತಃಕಾಲ ದೀಪ ಪ್ರತಿಷ್ಠೆ ಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮವು ವಿವಿಧ ಭಜನಾ ಸಂಘಗಳ ಭಜನೆ ಸೇವೆಯೊಂದಿಗೆ ಮುಂದುವರೆಯಿತು . ಮಧ್ಯಾಹ್ನ ಮಹಾಪೂಜೆ ನಂತರ ಮಂದಿರದಲ್ಲಿ ಹಲವು ವರ್ಷಗಳಿಂದ ವೈದಿಕ ಕಾರ್ಯಗಳ ನೇತ್ರತ್ವ ವಹಿಸಿದ ಹಿರಿಯರಾದ ಶ್ರೀ ಕಂಬಾರು ಸುಬ್ರಮಣ್ಯ ಭಟ್ ಇವರನ್ನು ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಶ್ರೀ ಬಿ ಶಂಕರ ದೇವಾಂಗ ರವರು ಸನ್ಮಾನಿಸಿ ಗೌರವಿಸಿದರು . ಈ ಸಂಧರ್ಭದಲ್ಲಿ ಮಂದಿರದ ಸ್ಥಾಪಕಾಧ್ಯಕ್ಷರಾದ ಶ್ರೀ M ನಾರಾಯಣ ಮಾಸ್ತರ್ , ಮಂದಿರದ ಗೌರವಾಧ್ಯಕ್ಷರಾದ ಶ್ರೀ ಕೆ ಮಾನ ಮಾಸ್ತರ್, ಉದ್ಯಮಿ ಶ್ರೀ ಗೋಪಾಲ ಪೈ ಬದಿಯಡ್ಕ, ಚುಕ್ಕಿನಡ್ಕ ಮಂದಿರದ ಗುರುಸ್ವಾಮಿ ಶ್ರೀ ಕುಞಕ್ಕನ್ನ ಗುರುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಅನ್ನದಾನ ಕಾರ್ಯಕ್ರಮ ಜರುಗಿತು . ಸಾಯಂಕಾಲ 5 ಗಂಟೆಗೆ ತಾಯಂಬಕ ಬಳಿಕ 7 ಗಂಟೆಗೆ ಶ್ರೀ ಕ್ಷೇತ್ರ ಕಾರ್ಮಾರಿನಿಂದ ಸಾಗಿ ಬಂದ ಆಕರ್ಷಕ ಉಲ್ಪೆ ಮೆರವಣಿಗೆ ಮಂದಿರ ತಲುಪಿತು . ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಈ ಸಂಧರ್ಭದಲ್ಲಿ ಮಂದಿರಕ್ಕೆ ಆಗಮಿಸಿದರು . ಶ್ರೀಗಳನ್ನು ಮಂದಿರದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮಹಾಪೂಜೆಯ ಬಳಿಕ ಭಕ್ತಹಾದಿಗಳಿಗೆ ಶ್ರೀಗಳು ಮಂತ್ರಕ್ಷತೆ ಫಲ ವನಿತ್ತು ಹರಸಿದರು. ಈ ಶುಭ ಸಂಧರ್ಭದಲ್ಲಿ ಮಂದಿರಕ್ಕೆ ಭೇಟಿ ನೀಡಿದ ಕಲಾಪೋಷಕ ಶ್ರೀ ಟಿ ಶ್ಯಾಮ್ ಭಟ್ IAS ಇವರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು . ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಹನುಮಗಿರಿ ಮೇಳ ದವರಿಂದ " ಧಕ್ಷಾಧ್ವರ- ಮಾರಣಾಧ್ವರ- ಮೀನಾಕ್ಷಿ ಕಲ್ಯಾಣ " ಯಕ್ಷಗಾನ ಬಯಲಾಟ ಜರುಗಿತು. ಅಪಾರ ಕಲಾಭಿಮಾನಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿದ ಯಕ್ಷಗಾನ ದ ಮಂಗಳ ಹಾಡಿನೊಂದಿಗೆ 40 ನೇ ವಾರ್ಷಿಕೋತ್ಸ್ವವು ಮುಕ್ತಯಗೊಂಡಿತು .ಕಾರ್ಯಕ್ರಮದ ಅಪೂರ್ವ ಯಶಸ್ಸಿಗೆ ಸಹಕರಿಸಿದ ಎಲ್ಲಾಊರ ಪರವೂರ ಭಕ್ತದಿಗಳಿಗೆ, ಹಗಲಿರುಳು ದುಡಿದ ಕಾರ್ಯಕರ್ತರಿಗೆ ಸೇವಾ ಸಮಿತಿಯು ಕೃತಜ್ಞತೆ ಸಲ್ಲಿಸಿದೆ.
- Get link
- X
- Other Apps
Comments
Post a Comment