ಹಿರಿಯ ವಿದ್ವಾಂಸ ಬಳ್ಳಪದವು ಮಾಧವ ಭಟ್ಟರಿಗೆ ಎಡನೀರು ಶ್ರೀಗಳಿಂದ ಸ್ವಗ್ರಹದಲ್ಲಿ ಗೌರವಾರ್ಪಣೆ

ಹಿರಿಯ ವಿದ್ವಾಂಸ ಬಳ್ಳಪದವು ಮಾಧವ ಭಟ್ಟರಿಗೆ ಎಡನೀರು ಶ್ರೀಗಳಿಂದ ಸ್ವಗ್ರಹದಲ್ಲಿ ಗೌರವಾರ್ಪಣೆ 
FOX24LIVE 
✒️ವರದಿ ವೆಂಕಟಭಟ್ ಎಡನೀರು

   ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪ್ರಥಮ ಪಟ್ಟಾಭಿಷೇಕ ವಾರ್ಷಿಕ ಸಂದರ್ಭದಲ್ಲಿ ಹಿರಿಯ ವೈದಿಕ ವಿದ್ವಾಂಸ ,ಹಿರಿಯ ಸಂಗೀತ ಕಲಾವಿದರೂ, ಸರಳ ಸಜ್ಜನರು ಆಗಿರುವ ತೊಂಬತ್ತೆರಡು  ವರ್ಷದ ಶ್ರೀ ಬಳ್ಳಪದವು ಮಾಧವರಿಗೆ ಎಡನೀರು  ಶ್ರೀಗಳು  ಅವರ ಸ್ವಗೃಹಕ್ಕೆ ಭೇಟಿ ನೀಡಿ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು ಶ್ರೀಮಠದಲ್ಲಿ ವಾರ್ಷಿಕ ಸಂದರ್ಭದಲ್ಲಿ ವಾಚಿಸಿದ ಮಾನಪತ್ರವನ್ನು ಇತ್ತು ಹರಸಿದರು.
ಈ ಸಂದರ್ಭದಲ್ಲಿ ಶ್ರೀ ಕಿಳಿಂಗಾರು ಗೋಪಾಲಕೃಷ್ಣ ಭಟ್ ,
ಶ್ರೀ ರಾಜೇಂದ್ರ ಕಲ್ಲೂರಾಯ, ರಾಜಾರಾಮ್ ಪೆರ್ಲ ,
ವೆಂಕಟ್ ಭಟ್ ಎಡನೀರು, ಸತೀಶ್ ರಾವ್ ಎಡನೀರು ಹಾಗೂ  ನಟರಾಜ ಶರ್ಮ ದಂಪತಿಗಳು ಉಪಸ್ಥಿತರಿದ್ದರು.

Comments