ಅಪೂರ್ವ ಉಬ್ರಂಗಳ ಇವರಿಗೆ ಫಿಸಿಕಲ್ ಕೆಮೆಸ್ಟ್ರಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್



ಅಪೂರ್ವ ಉಬ್ರಂಗಳ ಇವರಿಗೆ ಫಿಸಿಕಲ್ ಕೆಮೆಸ್ಟ್ರಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್
ಬದಿಯಡ್ಕ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 2019-20ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆ ಎಂ.ಎಸ್.ಸಿ. ಫಿಸಿಕಲ್ ಕೆಮೆಸ್ಟ್ರಿ ವಿಭಾಗದಲ್ಲಿ ಅಪೂರ್ವ ಉಬ್ರಂಗಳ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ. ಶನಿವಾರ ನಡೆದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರವಾಡ ಎಗ್ರಿಕಲ್ಚರಲ್ ಸೈನ್ಸ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಮಹಾದೇವಪ್ಪ ಬಿ.ಚಟ್ಟಿ ಇವರು ಪ್ರಶಸ್ತಿಪ್ರಧಾನ ಮಾಡಿದರು. ಉಬ್ರಂಗಳ ಜಯರಾಜ ಕುಣಿಕುಳ್ಳಾಯ ಹಾಗೂ ಪ್ರತಿಭಾ ರಾಣಿ ಇವರ ಪುತ್ರಿ. ಪೆರಡಾಲ ನವಜೀವನ ಪ್ರೌಢಶಾಲೆ, ಎಡನ್ನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ, ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜಿನ ಹಳೆವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗಮನಾರ್ಹ ಸಾಧನೆಯನ್ನು ಗೈದು ನಾಡಿಗೆ ಕೀರ್ತಿಯನ್ನು ತಂದಿದ್ದಾರೆ.

Comments