- Get link
- X
- Other Apps
- Get link
- X
- Other Apps
ಕನ್ನೆಪ್ಪಾಡಿ ಆಶ್ರಮದಲ್ಲಿ ಸ್ಮೃತಿ ಕೇರಳ ಅಂಗವಾಗಿ ತೆಂಗಿನ ಗಿಡ ನೆಟ್ಟ ಸಂಸದ ಸುರೇಶ್ ಗೋಪಿ
ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಸ್ಮೃತಿ ಕೇರಳದ ಅಂಗವಾಗಿ ಸೋಮವಾರ ಸಂಸದ ಸುರೇಶ್ ಗೋಪಿ ಅವರು ತೆಂಗಿನ ಗಿಡ ನೆಡುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಆಶ್ರಮ ಸಂಸ್ಥಾಪಕಿ ದಿವಗಂತ ಬಿ.ವೈ. ಶಾರದಾ ಅಮ್ಮನವರ ಹೆಸರಿನಲ್ಲಿ ತೆಂಗಿನ ಗಿಡವನ್ನು ನೆಡಲಾಯಿತು. ಆಶ್ರಮದ ಗೋವಿಗೆ ಗೋಗ್ರಾಸವನ್ನು ನೀಡಿ, ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾಚನೆಗೈದರು. ಆಶ್ರಮದ ವೃದ್ಧರೊಂದಿಗೆ ಆಶಯ ವಿನಮಯವನ್ನು ನಡೆಸಿದರು. ಆಡಳಿತ ಸಮಿತಿ ಅಧ್ಯಕ್ಷ ಪುದುಕೋಳಿ ಶ್ರೀಕೃಷ್ಣ ಭಟ್ ಶಾಲು ಹೊದೆಸಿ ಗೌರವಿಸಿದರು. ಆಶ್ರಮದ ಪರವಾಗಿ ಸ್ಮರಣಿಕೆಯನ್ನು ನೀಡಲಾಯಿತು. ವಿದ್ಯಾರ್ಥಿ ಗೌರಿನಂದನ್ ಬಿಡಿಸಿದ ಸುರೇಶ್ ಗೋಪಿಯವರ ಭಾವಚಿತ್ರವನ್ನು ಅವರಿಗೆ ನೀಡಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್, ಹರೀಶ್ ನಾರಂಪಾಡಿ, ಶಿವಶಂಕರ ಭಟ್ ಗುಣಾಜೆ, ಗಣೇಶಕೃಷ್ಣ ಅಳಕ್ಕೆ, ರಮೇಶ್ ಕಳೇರಿ, ರಾಜೇಶ್ ಮಾಸ್ತರ್ ಅಗಲ್ಪಾಡಿ, ಮಿಮಿಕ್ರಿ ಸುರೇಶ್ ಯಾದವ್, ರೇಶ್ಮಾ, ದಿವ್ಯಾ, ಜಯರಾಮ ಹಾಗೂ ಆಶ್ರಮದ ಹಿತಚಿಂತಕರು ಪಾಲ್ಗೊಂಡಿದ್ದರು.
- Get link
- X
- Other Apps
Comments
Post a Comment