ಮಿಂಚಿಪದವು-ಕಕ್ಕೆ ಬೆಟ್ಟು ರಸ್ತೆಲೋಕಾರ್ಪಣೆ

ಬೆಳ್ಳೂರು ಗ್ರಾಮ ಪಂಚಾಯತಿನ ಆರನೇ ವಾರ್ಡಿನ ಮಿಂಚಿಪದವು-ಕಕ್ಕೆ ಬೆಟ್ಟು ರಸ್ತೆಯನ್ನು ಉದ್ಯೋಗ ಖಾತರಿ ಯೋಜನೆಯ ಮುಖೇನ ಕಾಂಕ್ರೀಟಿಕರಣಗೊಳಿಸಿ ಇಂದು ದಿನಾಂಕ 15-10- 2021 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಎಂ ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹಾಗೂ ವಾರ್ಡು ಸದಸ್ಯೆಯಾದ ಶ್ರೀಮತಿ ಗೀತಾ.ಕೆ. ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ  ವಿಧ್ಯಾಭಾಸ ಸ್ಥಾಯೀ ಸಮಿತಿ ಅಧ್ಯಕ್ಷರಾದ ಜಯಕುಮಾರ್.ಕೆ., ಉದ್ಯೋಗ ಖಾತರಿ AE ಶಿಲ್ಪಾ ಜೆ, ಬಿಜೆಪಿ ಪಂಚಾಯತು ಅಧ್ಯಕ್ಷರಾದ ಜಯಾನಂದ ಕುಳ, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು. ವಾರ್ಡು ಕನ್ವೀನರ್ ದಿವ್ಯಪ್ರಸಾದ್ ಸ್ವಾಗತಿಸಿ ಗೌತಮ್ ವಂದಿಸಿದರು.

Comments