- Get link
- X
- Other Apps
- Get link
- X
- Other Apps
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯಿಂದ ಡಾ ವೆಂಕಟರಾಜ ಪುಣಿಚಿತ್ತಾಯ ಜನ್ಮ ದಿನಾಚರಣೆ ಆಚರಣೆ
ಬದಿಯಡ್ಕ:ತುಳು ಭಾಷೆಗಾಗಿ ಅನರ್ಘ್ಯ ಸೇವೆ ಸಲ್ಲಿಸಿದ ಡಾ.ವೆಂಕಟರಾಜ ಪುಣಿಚಿತ್ತಾಯರು ಸಾಹಿತಿ, ಸಂಶೋಧಕರು ಮಾತ್ರವಲ್ಲದೆ ತುಳು ಸಾಹಿತ್ಯ ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿದವರು. ಅವರ ಸಾಧನೆ ತುಳು ನಾಡು ಎಂದೂ ಮರೆಯುವಂತಿಲ್ಲ ಎಂದು ಬದಿಯಡ್ಕ ಪಂಚಾಯತು ಅಧ್ಯಕ್ಷೆ ಶಾಂತಾ ಅಭಿಪ್ರಾಯ ಪಟ್ಟರು. ಅವರು
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ವತಿಯಿಂದ ನಡೆದ ಡಾ.ವೆಂಕಟರಾಜ ಪುಣಿಚಿತ್ತಾಯರ ಜನ್ಮದಿನದಂದು ಅವರನ್ನು ಸ್ಮರಿಸಿ ಮಾತನಾಡಿದರು.
ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಪ್ತ ಕಿರುಚಿತ್ರದ ಕತೆಗಾರ ಮಧುಸೂದನ ಬಲ್ಲಾಳ್ ಪುಣಿಚಿತ್ತಾಯರ ನೆನಪುಗಳನ್ನು ಮೆಲುಕು ಹಾಕಿದರು. ಜನಪದ ಲೋಕ ಪ್ರಶಸ್ತಿ ಪುರಸ್ಕೃತ ಜಯರಾಮ ಪಾಟಾಳಿ ಪಡುಮಲೆ, ಆರ್.ಕೆ.ಶೆಟ್ಟಿ, ಮೋಹನ್ ಬಲ್ಲಾಳ್, ಚರಣ್ ದೀಪ್ ಉಪಸ್ಥಿತರಿದ್ದರು. ಸೌಪರ್ಣಿಕಾ ನವಜೀವನ ಸಮಿತಿಯ ಪ್ರಸಾದ ಬದಿಯಡ್ಕ ಸ್ವಾಗತಿಸಿ. ಮನೋಜ್ ವಾಂತಿಚ್ಚಾಲ್ ವಂದಿಸಿದರು
- Get link
- X
- Other Apps
Comments
Post a Comment