ಬದಿಯಡ್ಕದಲ್ಲಿ ನವಜೀವನ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಹಾಯಧನ ವಿತರಣೆ

ಬದಿಯಡ್ಕದಲ್ಲಿ ನವಜೀವನ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಹಾಯಧನ ವಿತರಣೆ 
ಬದಿಯಡ್ಕ :   ಸುಸಂಸ್ಕೃತ ಸಮಾಜಕ್ಕಾಗಿ ಆರ್ಥಿಕ ಸಹಾಯ, ಚಿಕಿತ್ಸಾ ಸಹಾಯ ಮುಂತಾದ ಸತ್ಕಾರ್ಯದಲ್ಲಿ ತೊಡಗಿಕೊಂಡು ಉತೃಷ್ಟ ಚಿಂತನೆ ಹಾಗೂ ಪರಸ್ಪರ ಸಹಕಾರದ ಮನೋಭಾವವನ್ನು ಗಟ್ಟಿಗೊಳಿಸಯವಲ್ಲಿ ನವಜೀವನ. ಸಮಿತಿಗಳ ಕಾರ್ಯ ಶ್ಲಾಘನೀಯ. ‌

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರನ್ನು ಒಗ್ಗೂಡಿಸಿ, ನವಜೀವನದ ದಾರಿಯನ್ನು ತೋರಿಸುವುದರೊಂದಿಗೆ ಇತರರನ್ನೂ ಸರಿದಾರಿಯಲ್ಲಿ ಕೊಂಡೊಯ್ಯುವ ಸಹೃದಯತೆಯನ್ನು ತುಂಬಿದೆ.  ಇಂದಿನ ಈ ಕಾರ್ಯಕ್ರಮವು ಅದಕ್ಕೆ ಸಾಕ್ಣಿ ಎಂದು  ಜನಜಾಗೃತಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು ಅಭಿಪ್ರಾಯ ಪಟ್ಟರು. ಅವರು ಪೆರಡಾಲ ಗ್ರಾಮದ ಚುಕ್ಕಿನಡ್ಕ ನವಜೀವನ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪೆರಡಾಲ ಗ್ರಾಮದ ಚುಕ್ಕಿನಡ್ಕ ಮನೆ  ಯೋಗೀಶ್ ಕುಟುಂಬಕ್ಕೆ  ಚಿಕಿತ್ಸೆಗಾಗಿ ನೀಡಲಾಗುವ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಸತೀಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರು, ಮುಕೇಶ್ ಗಟ್ಟಿ  ಯೋಜನಾಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ಕಾಸರಗೋಡು,
ಶಿಭಿರಾಧಿಕಾರಿ ದೇವಿಪ್ರಸಾದ್,ಪತ್ರಕರ್ತ
 ಅಖಿಲೇಶ್ ನಗುಮುಗಂ,
ಶ್ಯಾಮ್ ಆಳ್ವ, ಪದಾಧಿಕಾರಿಗಳು ಜನಜಾಗೃತಿ ವೇದಿಕೆ, ಜಯರಾಮ ಉಪಸ್ಥಿತರಿದ್ದು ಶುಭಾಶಂಸನೆಗೈದರು.‌ ಗಣೇಶ್.ಜಿ, ಪ್ರಸಾದ್ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು.
ಬದಿಯಡ್ಕ ವಲಯದ ಮೇಲ್ವಿಚಾರಕರಾದ ದಿನೇಶ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು .ಸೌಪರ್ಣಿಕಾ ನವಜೀವನ ಸಮಿತಿಯ ಜಯರಾಮ ಪಡುಮಲೆ ಅವರು ವರದಿ ವಾಚಿಸಿದರು.ಜಲಜಾಕ್ಷಿ ಧನ್ಯವಾದ ಸಮರ್ಪಿಸಿದರು. ನವಜೀವನ ಸಮಿತಿಯ ಸರ್ವ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Comments

Post a Comment