ಪ್ರಧಾನಮಂತ್ರಿ ಜನ್ಮ ದಿನದ ಶುಭಾಶಯ ಕೋರಿದ ಬಿಜೆಪಿ ಕುಂಬಡಾಜೆ ಪಂಚಾಯತು ಸಮಿತಿ

ಪ್ರಧಾನಮಂತ್ರಿ ಜನ್ಮ ದಿನದ ಶುಭಾಶಯ ಕೋರಿದ ಬಿಜೆಪಿ ಕುಂಬಡಾಜೆ ಪಂಚಾಯತು ಸಮಿತಿ
 ಕುಂಬಡಾಜೆ :-ಭಾರತೀಯ ಜನತಾ ಪಾರ್ಟಿ ಕುಂಬಡಾಜೆ ಪಂಚಾಯತು ಸಮಿತಿ ನೇತೃತ್ವದಲ್ಲಿ ದೇಶದ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ವಿತರಿಸಿದ ಪ್ರಧಾನಿ ಶ್ರೀ ನರೇಂದ್ರಮೋದಿಯವರಿಗೆ ಕೃತಜ್ಞತೆ ಸಲ್ಲಿಸಿ ಅವರಿಗೆ 71ನೇ ಜನ್ಮ ದಿನದ ಶುಭಾಶಯವನ್ನು ಕೋರಿ ಅಂಚೆ ಕಾರ್ಡು ಕಳುಹಿಸಲಾಯಿತು ಮವ್ವಾರು ಅಂಚೆ ಕಚೇರಿಯಲ್ಲಿ  ನಡೆದ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಶ್ರೀಎಮ್  ಸಂಜೀವಶೆಟ್ಟಿ ಉದ್ಘಾಟಿಸಿದರು. ಪಂಚಾಯತು ಸಮಿತಿ ಅಧ್ಯಕ್ಶರಾದ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಕಾಸರಗೋಡು ಮಂಡಲ ಕಾರ್ಯದರ್ಶಿ ಹರೀಶ್ ಗೋಸಾಡ, ಪಂಚಾಯತು ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಎಸ್ ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಂದರ ಮವ್ವಾರು, ಬ್ಲಾಕು ಪಂಚಾಯ್ತು ಸದಸ್ಯೆ ನಳಿನಿ ಕೃಷ್ಣ ಮಲ್ಲಮೂಲೆ, ವಾರ್ಡು ಸದಸ್ಯೆ ಸುನಿತ ಜೆ ರೈ, ಸುಧಾಮ ಮವ್ವಾರು, ಜಯಪ್ರಕಾಶ್ ಶೆಟ್ಟಿ, ಮೊದಲಾದವರು ಭಾಗವಹಿಸಿದರು.

Comments