ಎಡನೀರು ಶ್ರೀ ಮಠದ ನೂತನ ಧ್ವಜಸ್ತಂಭ ಲೋಕಾರ್ಪಣೆ

ಎಡನೀರು ಶ್ರೀ ಮಠದ ನೂತನ ಧ್ವಜಸ್ತಂಭ ಲೋಕಾರ್ಪಣೆ
ವಿದ್ಯಾನಗರ,ಆ.೧೫: ದೇವಭಕ್ತಿ ಮತ್ತು ದೇಶ ಭಕ್ತಿಯನ್ನು ಪ್ರತಿಯೊಬ್ಬ ನಾಗರಿಕನು ಮೈಗೂಡಿಸಿಕೊಂಡಲ್ಲಿ ಖಂಡಿತವಾಗಿಯೂ ದೇಶ ಸುಭೀಕ್ಷವಾಗುತ್ತದೆ. ಅದರೊಂದಿಗೆ ದೇಹ ಭಕ್ತಿಯನ್ನೂ ರೂಢಿಸಿಕೊಂಡು ಕೊರೋನಾದ ವಿರುದ್ಧ ಹೋರಾಡಿ ಕೊರೋನಾದಿಂದಲೂ ಸ್ವಾತಂತ್ರ್ಯ ಹೊಂದೋಣ ಎಂದು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ನುಡಿದರು. ಅವರು ದೇಶದ ೭೫ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣವನ್ನು ನಿರ್ವಹಿಸಿ ಆಶೀರ್ವಚನ ನೀಡಿದರು.
__________________________________________
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
_________FOX24LIVENEWS CHANNEL________
ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಜಿಯವರ ಪುಣ್ಯ ಸ್ಮರಣೆಗಾಗಿ ಶ್ರೀಮಠದ ವತಿಯಿಂದ ವೆಂಕಟ್ ಭಟ್ ಎಡನೀರು ಸೇವಾ ರೂಪದಲ್ಲಿ ನೀಡಿದ ನೂತನ ಧ್ವಜಸ್ತಂಭದ ಉದ್ಘಾಟನೆಯನ್ನು ಭಾರತೀಯ ಪ್ಯಾರಚೂಟ್ ರೆಜಿಮೆಂಟಿAದ ನಿವೃತ್ತರಾದ ಕಮಾಂಡೋ ಶ್ಯಾಮರಾಜ್ ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿ ಅಮೃತ ಮಹೋತ್ಸವದ ಅಮೃತ ಘಳಿಗೆಯಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಆನಂದ ನೀಡಿದೆ ಎಂದರು.

Comments