ಉಪ್ಪಳ ದರ್ವೇಶ್ ಕಾಂಪ್ಲೆಕ್ಸ್ ಫ್ಲೋರ್ ವ್ಯಾಪಾರಿಗಳಿಂದ ಓಣಂ ಆಚರಣೆ.

ಉಪ್ಪಳ ದರ್ವೇಶ್ ಕಾಂಪ್ಲೆಕ್ಸ್  ವ್ಯಾಪಾರಿಗಳಿಂದ  ಓಣಂ ಆಚರಣೆ.
ಉಪ್ಪಳ:- ಉಪ್ಪಳದ ಹೃದಯ ಭಾಗದಲ್ಲಿರುವ ದರ್ವೇಶ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಕಾರ್ಯಚರಿಸುವ ವ್ಯಾಪಾರಿ ಸಮೂಹಗಳು ಒಂದುಗೂಡಿ ಕೇರಳದ ನಾಡ ಹಬ್ಬವಾದ "ಓಣಂ" ಹಬ್ಬವನ್ನು ಕೋವಿಡ್ ನಿಯಮಗಳಿಗೆ ಬದ್ಧವಾಗಿ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷರಾದ ಹನೀಫ್  ಡಿಸೈನರ್ ಉದ್ಘಾಟಿಸಿ ಶುಭಾಶಯ ಕೋರಿದರು. ಈ ಸಂದರ್ಭ ವ್ಯಾಪಾರಿ ಸಮೂಹ ತಂಡದಿಂದ ಬ್ಲಾಕ್ ಪಂಚಾಯತಿಗೆ ಆಯ್ಕೆಯಾಗಿ ಉಪಾಧ್ಯಕ್ಷರಾದ ಹನೀಫ್ ಡಿಸೈನರ್ ಇವರನ್ನ ಓಡಿನಿ ಮಾಲಕರಾದ ಸಲೀಮ್ ಶಾಲು ಹೊದಿಸಿ, ಗೌರವಿಸಲಾಯಿಸಿದರು. ಕಾರ್ಯಕ್ರಮದಲ್ಲಿ ಮೆನ್ಸ್ ಇದರ ಮಾಲಕರಾದ ಸರ್ಫುದ್ದಿನ್  ಸ್ವಾಗತಿಸಿ, ಉಪ್ಪಳ ಪ್ರಿಂಟ್ ವರ್ಲ್ಡ್ ನ ಮಾಲಕರಾದ ಅಶ್ವಥ್ ಪೂಜಾರಿ ಲಾಲ್ಬಾಗ್ ವಂದಿಸಿದರು. ಈ ವೇಳೆ ವ್ಯಾಪಾರ ಸಂಸ್ಥೆಯ ಮಾಲಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Comments