ಬೆಳ್ಳೂರು - ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ:

    ಬೆಳ್ಳೂರು  ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ:
ಬೆಳ್ಳೂರು: ಬೆಳ್ಳೂರು ಗ್ರಾಮ ಪಂಚಾಯತ್, ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬೆಳ್ಳೂರು, ಸಹಕಾರಿ ಬ್ಯಾಂಕ್ ಬೆಳ್ಳೂರು ಮತ್ತು ಸರಕಾರಿ ಎಲ್ ಪಿ ಶಾಲೆ ನೆಟ್ಟಣಿಗೆಯ ಸಹಾಯದೊಂದಿಗೆ ಪಂಚಾಯತಿನ 5 ಶಾಲೆಗಳ ವಿದ್ಯಾರ್ಥಿಗಳ ಡಿಜಿಟಲ್  ಕಲಿಕೆಗಾಗಿ ಎರಡು ಲಕ್ಷ ರೂಪಾಯಿ ಮೊತ್ತದ 43 ಮೊಬೈಲ್ ಗಳನ್ನು ವಿತರಿಸಲಾಯಿತು. ಬೆಳ್ಳೂರು ಪಂಚಾಯತ್ ಅಧ್ಯಕ್ಷರಾದ ಶ್ರೀ ಶ್ರೀಧರ ಎಂ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯತ್ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಜಯಕುಮಾರ್ ಅಧ್ಯಕ್ಷ ವಹಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರಹಾಸ ರೈ , ಪಂಚಾಯತ್ ಸದಸ್ಯರಾದ ಶ್ರೀ ಶ್ರೀಪತಿ ಕಡಂಬಳಿತಾಯ, ಅಬ್ದುಲ್ ಖಾದರ್ ಮದಕ್ಕಂ, ಶ್ರೀಮತಿ ಗೀತಾ, ಪಂಚಾಯತ್ ಕಾರ್ಯದರ್ಶಿ ಶ್ರೀ ಥೋಮಸ್, ಬೆಳ್ಳೂರು ಶಾಲಾ ಅಧ್ಯಾಪಕರಾದ ಶ್ರೀ kunhiraama ಮಣಿಯಾಣಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. PEC ಕಾರ್ಯದರ್ಶಿ ಹಾಗೂ ನೆಟ್ಟಣಿಗೆ ಶಾಲಾ ಮುಖ್ಯೋಪಾಧ್ಯಾಯರು ಆದ ಶ್ರೀ ಪ್ರಕಾಶ್ ಸ್ವಾಗತಿಸಿ ಶಿಕ್ಷಕ ನವೀನ್ ಕುಮಾರ್ ವಂದಿಸಿದರು

Comments