ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

.ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಕುಂಬಡಾಜೆ : ಪಂಚಾಯತಿನ ವಾರ್ಡ್ ಗಳಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಶಿಬಿರ  ಗಳಲ್ಲಿ ಆಯಾ ವಾರ್ಡ್ ನ ಜನಸಂಖ್ಯೆಗೆ ಹೊಂದಿಕೊಂಡು ವ್ಯಾಕ್ಸಿನ್ ನ ಮಿತಿಯನ್ನು ಹೆಚ್ಚಿಸಬೇಕು, ಕರ್ನಾಟಕ ದಲ್ಲಿ ಕಲಿಯುತ್ತಿರುವ ಗಡಿಭಾಗದ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಆಧ್ಯತೆ ನೀಡಬೇಕು, ಎರಡನೇ ಹಂತದ ವ್ಯಾಕ್ಸಿನ್  ಸಿಗಲು ಉಂಟಾಗುವ ವಿಳಂಬವನ್ನು ಪರಿಹರಿಸಬೇಕು ಮತ್ತು ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಕುಂಬಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ   ರಕ್ತ ತಪಾಸಣೆ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕಾಸರಗೋಡು ಜಿಲ್ಲಾಧಿಕಾರಿಗೆ ಬಿಜೆಪಿ ಪಂಚಾಯತ್ ಸಮಿತಿಯು ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕುಂಬಡಾಜೆ ಬಿಜೆಪಿ ಅಧ್ಯಕ್ಷರಾದ ಶ್ರೀ ರವೀಂದ್ರ ರೈ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಜಿಲ್ಲಾ ಉಪಾಧ್ಯಕ್ಷೆ ಹಾಗು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶೈಲಜಾ ಭಟ್ , ಯುವಮೋರ್ಚಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಮೋದ್ ಭಂಡಾರಿ ಜತೆಗಿದ್ದರು

Comments