ವಾಟ್ಸಪ್ ಗುಂಪಿನ ಮೂಲಕ ಬಡ ವಿದ್ಯಾರ್ಥಿಗಳ ಆನ್ಲೈನ್ ಕಲಿಕೆಗಾಗಿ ಮೊಬೈಲ್ ವಿತರಣೆ

ವಾಟ್ಸಪ್ ಗುಂಪಿನ ಮೂಲಕ ಬಡ ವಿದ್ಯಾರ್ಥಿಗಳ ಆನ್ಲೈನ್ ಕಲಿಕೆಗಾಗಿ ಮೊಬೈಲ್ ವಿತರಣೆ
                          subscribe
              FOX24LIVE NEWS CHANNEL
ಬದಿಯಡ್ಕ.: ಜುಲೈ 18. ಕೊರೋನಾ ಕಾಲಘಟ್ಟದಲ್ಲಿ ಆರ್ಥಿಕವಾಗಿ ಎಲ್ಲರೂ ಕಷ್ಟಪಡುವ ಈ ಸಮಯದಲ್ಲಿ ಶಾಲೆಯಲ್ಲಿ ಚಟುವಟಿಕೆಗಳು ನಡೆಯದ ಕಾರಣ ಮಕ್ಕಳ ಕಲಿಕೆಯು ಮನೆಯಲ್ಲಿ ಆನ್ಲೈನ್ ಮುಖಾಂತರ ನಡೆಯುತ್ತಿದೆ.  ಆನ್ಲೈನ್ ಕಲಿಕೆಗಾಗಿ   ಸೂಕ್ತ ಉಪಕರಣಗಳಿಲ್ಲದೆ ಹಲವಾರು ಮಕ್ಕಳ  ಕಲಿಕೆ ನಷ್ಟವಾಗುತ್ತದೆ.  ಮುಗ್ಧ ಮಕ್ಕಳ ಕಲಿಕೆಯು ತೊಡಕಿಲ್ಲದೆ ಸಾಗಲಿ ಎಂಬ ಉದ್ದೇಶದಿಂದ ಎ.ಯು. ಪಿ ಶಾಲೆ ಪಳ್ಳತ್ತಡ್ಕ  ಹಾಗೂ ನವಜೀವನ ಶಾಲೆಯ  ಮೂರು ಮಕ್ಕಳ  ಮನೆಗಳಿಗೆ ತೆರಳಿ ಮಕ್ಕಳನ್ನು ಮುಖತಃ ಭೇಟಿಯಾಗಿ ಕಲಿಕೆಗಾಗಿ ಮೊಬೈಲನ್ನು ವಿತರಿಸಲಾಯಿತು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ  1996 ಎಸೆಸೆಲ್ಸಿ  ವಿಭಾಗದ ವಾಟ್ಸಪ್ ಗುಂಪಿನ  17 ಸದಸ್ಯರು ಮಕ್ಕಳಿಗೆ  ಸಹಾಯ ಮಾಡಿ ನಮ್ಮ ಸಮಾಜಕ್ಕೆ ಮಾದರಿಯಾದ  ಚಟುವಟಿಕೆಯನ್ನು ನಡೆಸಿಕೊಟ್ಟರು.  ಈ ಗುಂಪಿನ ಪ್ರತಿನಿಧಿಗಳಾದ   ಶಾಂತ,  ರೇಷ್ಮಾ ,  ಕೃಷ್ಣಕಿಶೋರ ಏನಂಕೂಡ್ಲು, ಮಂಜುನಾಥ ಆಳ್ವ ಕಡಾರ್, ಪ್ರಶಾಂತ್ ಚೇಡಿಕಾನ, ರತನ್ ಕುಮಾರ್ ಹಾಗೂ ಗುರುಪ್ರಸಾದ್ ರೈ ಬದಿಯಡ್ಕ   ಇವರು ಮಕ್ಕಳ ಮನೆಗೆ ತೆರಳಿ ಮೊಬೈಲನ್ನು ವಿತರಿಸಿದರು.

Comments

Post a Comment