- Get link
- X
- Other Apps
- Get link
- X
- Other Apps
ಕಾಸರಗೋಡು ಜಿಲ್ಲೆ ಕ್ರೀಡಾ ಪ್ರಗತಿಗೆ ಹೇರಳ ಸಾಧ್ಯತೆಯಿರುವ ಭೂಮಿ: ಸಚಿವ ಅಹಮ್ಮದ್ ದೇವರ್ ಕೋವಿಲ್
ವಿಡಿಯೊ ನೋಡಲು Fox24livenewschannel ಚಾನೆಲ್ ನ ಲಿಂಕ್ ಓಪನ್ ಮಾಡಿ
ಕಾಸರಗೋಡು, ಜು.16: ಕಾಸರಗೋಡು ಜಿಲ್ಲೆ ಕ್ರೀಡಾ ಪ್ರಗತಿಗೆ ಹೇರಳ ಸಾಧ್ಯತೆಯಿರುವ ಭೂಮಿ ಎಂದು ಸಚಿವ ಅಹಮ್ಮದ್ ದೇವರ್ ಕೋವಿಲ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಒಲಿಂಪಿಕ್ಸ್ ಅಸೊಸಿಯೇಶನ್ ನೇತೃತ್ವದಲ್ಲಿ ಪಡನ್ನಕ್ಕಾಡಿನ ಬೇಕಲ ಕ್ಲಬ್ ನಲ್ಲಿ ಶುಕ್ರವಾರ ನಡೆಸಲಾದ "ಆನ್ ಯುವರ್ ಮಾರ್ಚ್" ಸಮಗ್ರ ಕ್ರೀಡಾ ಅಭಿವೃದ್ಧಿ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಕ್ರೀಡಾ ತಾರೆಗಳಿಗೆ ಜನನ ನೀಡಿ, ಅನೇಕ ಇತಿಮಿತಿಗಳ ನಡುವೆಯೂ ರಾಷ್ಟ್ರೀಯ, ಅಂತಾರಾಷ್ಟರೀಯ ಮಟ್ಟಕ್ಕೇರಿಸಿದ ಕೀರ್ತಿ ಕಾಸರಗೋಡು ಜಿಲ್ಲೆಗಿದೆ. ಕೋವಿಡ್ ಸಂಕಷ್ಟದ ಅವಧಿ ಯಲ್ಲಿ ಅನೇಕ ಕ್ರೀಡಾಳುಗಳು ಮತ್ತು ತರಬೇತುದಾರರು ದೊಡ್ಡ ಮಟ್ಟದ ಮಾನಸಿಕ ಸಂಘರ್ಷ ಎದುರಿಸುತ್ತಿದ್ದಾರೆ. ಕ್ರೀಡಾ ವಲಯದ ಪುನಶ್ಚೇನಕ್ಕೆ ಕ್ರೀಡಾ ವಲಯದ ಮಂದಿ ಒಗ್ಗಟ್ಟಿನ ಯತ್ನ ನಡೆಸಬೇಕಿದೆ ಎಂದು ಅವರು ನುಡಿದರು.
ಜಿಲ್ಲಾ ಒಲಿಂಪಿಕ್ಸ್ ಅಟಸೋಸಿಯೇಶನ್ ಅಧ್ಯಕ್ಷ ಟಿ.ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಎಂ.ರಾಜಗೋಪಾಲನ್, ಇಂಡಿಯನ್ ವಾಲಿಬಾಲ್ ಕೋಚ್ ಟಿ.ಬಾಲಚಂದ್ರನ್, ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್ ಮುಖ್ಯ ಅತಿಥಿಗಳಾಗಿದ್ದರು. ಕಣ್ಣೂರು ವಿವಿ ಕ್ರೀಡಾ ವಿಭಾಗ ಸಹಾಯಕ ನಿರ್ದೇಶಕ ಡಾ.ಅನೂಪ್, ಡಾ.ಎಂ.ಕೆ.ರಾಜಶೇಖರನ್ ಪ್ರಬಂಧ ಮಂಡಿಸಿದರು. ಜಿಲ್ಲಾ ಒಲಿಂಪಿಕ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಎಂ.ಅಚ್ಯುತನ್ ಮಾಸ್ಟರ್ ಸ್ವಾಗತಿಸಿದರು. ಕೋಶಾಧಿಕಾರಿ ವಿ.ವಿ.ವಿಜಯಮೋಹನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಪಳ್ಳಂ ನಾರಾಯಣನ್ ವಂದಿಸಿದರು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತರಬೇತಿದಾರರು ಮೊದಲಾದವರು ವಂದಿಸಿದರು.
- Get link
- X
- Other Apps
Comments
Post a Comment