ಸಮಗ್ರ ಕ್ರೀಡಾ ಅಭಿವೃದ್ಧಿಗಾಗಿ 370.97 ಕೋಟಿ ರೂ.ನ ಯೋಜನೆ ಸಿದ್ಧ

ಸಮಗ್ರ ಕ್ರೀಡಾ ಅಭಿವೃದ್ಧಿಗಾಗಿ 370.97 ಕೋಟಿ ರೂ.ನ ಯೋಜನೆ ಸಿದ್ಧ
ವಿಡಿಯೋ ನೋಡಲು   FOX24LIVE   ಚಾನಲ್ ಸರ್ಚ್ ಮಾಡಿ
ಕಾಸರಗೋಡು, ಜು.16: ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯದ ಸಮಗ್ರ ಅಭಿವೃಧ್ಧಿ ಗುರಿಯಾಗಿಸಿ ಸಮಗ್ರ ಕ್ರೀಡಾ ಅಭಿವೃದ್ಧಿ ಸಿದ್ಧವಾಗಿದೆ. 
                             ಜಿಲ್ಲಾ ಒಲಿಂಪಿಕ್ಸ್ ಅಸೊಸಿಯೇಶನ್ ತಯಾರಿಸಿದ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ 38 ಕ್ರೀಡಾ ವಿಭಾಗಗಳನ್ನು ಅಳವಡಿಸಲಾಗಿದೆ. ಕ್ರೀಡಾ ವಲಯ ಅನುಭವಿಸುತ್ತಿರುವ ಮುಗ್ಗಟ್ಟುಗಳು, ಪರಿಹಾರ ಯೋಜನೆಗಳು, ಇಲ್ಲಿನ ಅಪಾರ ಸಾಧ್ಯತೆಗಳು. ಕ್ರೀಡಾಂಗಣ, ಮಲ್ಟಿ ಪರ್ಪಸ್ ಇಂಡೋರ್ ಸ್ಟೇಡಿಯಂ, ತರಬೇತು ಮೈದಾನ, ಕ್ರೀಡಾ ಅಕಾಡೆಮಿಯ ಹಾಸ್ಟೆಲ್, ತರಬೇತಿಗೆ ಅಗತ್ಯವಾದ ಉಪಕರಣಗಳ ವೆಚ್ಚ ಇತ್ಯಾದಿಗಳನ್ನು ಯೋಜನೆಯಲ್ಲಿ ಅಳವಡಿಸಲಾಗಿದೆ.   
                             ಯೋಜನೆಯನ್ನು ಶಾಸಕ ಎ.ಕೆ.ಎಂ.ಅಶ್ರಫ್ ಬಿಡುಗಡೆಗೊಳಿಸಿದರು. ಈ ಸದಂದರ್ಭ ಮಾತನಾಡಿದ ಅವರು ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯ ಅನುಭವಿಸುತ್ತಿರುವ ಕೊರತೆಗಳ ಪರಿಹಾರಕ್ಕೆ ಸಮಗ್ರ ಯೋಜನೆಗಳ ರಚನೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.  
                               ಕ್ರೀಡಾಪಟುಗಳಾದ ಗೋಪಾಲಕೃಷ್ಣನ್ ಮತ್ತು ಪಿ.ಕುಂಞಿಕೃಷ್ಣನ್ ಅವರಿಗೆ ಶಾಸಕ ಯೋಜನೆಯನ್ನು ಹಸ್ತಾಂತರಿಸಿದರು. ಡಾ.ಎಂ.ಕೆ.ರಾಜಶೇಖರನ್ ಯೋಜನೆಯನ್ನು ವಾಚಿಸಿದರು. 

Comments