- Get link
- X
- Other Apps
SPL KSRTS BUS SERVICES TO VALUVATION CENTERSಹೈಯರ್ ಸೆಕೆಂಡರಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಿಗೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಸಂಚಾರ
- Get link
- X
- Other Apps
SPL KSRTS BUS SERVICES TO VALUVATION CENTERS
ಹೈಯರ್ ಸೆಕೆಂಡರಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಿಗೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಸಂಚಾರ
ಕಾಸರಗೋಡು, ಜೂ.5: ಲಾಕ್ ಡೌನ್ ಅವಧಿಯಲ್ಲಿ ಶಿಕ್ಷಕರಿಗಾಗಿ ಹೈಯರ್ ಸೆಕೆಂಡರಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಿಗೆ ಯಾವುದೇ ಅಡತಡೆಗಳಿಲ್ಲದೆ ತಲಪಲು ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವಿಶೇಷ ಸಂಚಾರ ಸೌಲಭ್ಯ ಒದಗಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಕಾಸರಗೋಡು ಡಿಪೋ ಪ್ರಬಂಧಕ ತಿಳಿಸಿದರು.
ಜೂ.7ರಂದು ಸೋಮವಾರ ಬೆಳಗ್ಗೆ 7 ಗಂಟೆಗೆ ಕಾಸರಗೋಡಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ(ಚೆರ್ಕಳ, ಪೆರಿಯ) ನೀಲೇಶ್ವರ ಮೂಲಕ ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕೇಂದ್ರಕ್ಕೆ ತಲಪಲಾಗುವುದು. ಅಲ್ಲಿಂದ ತ್ರಿಕರಿಪುರ ಮೌಲ್ಯಮಾಪನ ಕೇಂದ್ರಕ್ಕೆ ತೆರಳಲಾಗುವುದು. ಮೌಲ್ಯಮಾಪನ ಮುಗಿಯುವ ಸಂದರ್ಭದಲ್ಲಿ ಸಂಜೆ ತ್ರಿಕರಿಪುರದಿಂದ ಚಾಯೋತ್ ಗೆ , ಅಲ್ಲಿಂದ ನೀಲೇಶ್ವರ ರಾಷ್ಟ್ರೀಯ ಹೆದ್ದಾರಿ ಮೂಲಕ ಕಾಸರಗೋಡಿಗೂ ಸೇವೆ ನಡೆಸಲಾಗುವುದು ಎಂದವರು ನುಡಿದರು.
ಮತ್ತೊಂದು ಸರ್ವೀಸ್ ಸೋಮವಾರ ಬೆಳಗ್ಗೆ 7 ಗಂಟೆಗೆ ಪಯ್ಯನ್ನೂರಿನಿಂದ ನೀಲೇಶ್ವರ, ಕಾಞಂಗಾಡು, ಚಂದ್ರಗಿರಿ ಸೇತುವೆ ಕೆ.ಎಸ್.ಟಿ.ಪಿ. ರಸ್ತೆ ಮೂಲಕ ಕಾಸರಗೋಡಿಗೆ ತಲಪಿ ಅಲ್ಲಿಂದ ತಳಂಗರೆಯ ಮೌಲ್ಯಮಾಪನ ಕೇಂದ್ರಕ್ಕೆ ಸೇವೆ ನಡೆಸಲಿದೆ. ಸಂಜೆ ತಳಂಗರೆಯಿಂದ ಚಂದ್ರಗಿರಿ ಸೇತುವೆ ಮೂಲಕ ಕಾಞಂಗಾಡು, ನೀಲೇಶ್ವರ ಹಾದಿಯಾಗಿ ಪಯ್ಯನ್ನೂರಿಗೆ ಸಂಚಾರ ನಡೆಸಲಾಗುವುದು. ಸಾರ್ವಜನಿಕ ಸಂಚಾರ ಆರಂಭವಾಗುವ ತನಕ ಕೆ.ಎಸ್.ಆರ್.ಟಿ.ಸಿ.ಯ ವಿಶೇಷ ಸಂಚಾರ ಮುಂದುವರಿಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಈ ವಿಶೇಷ ಸಂಚಾರ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
.....
- Get link
- X
- Other Apps
Comments
Post a Comment