REDUCTION IN COVID PROTOCAL ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಕಟ್ಟುನಿಟ್ಟಿನಲ್ಲಿ ಕೊಂಚ ಸಡಿಲಿಕೆ


REDUCTION IN COVID PROTOCAL
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಕಟ್ಟುನಿಟ್ಟಿನಲ್ಲಿ ಕೊಂಚ ಸಡಿಲಿಕೆ 
ಕಾಸರಗೋಡು, ಜೂ.2: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ನಲ್ಲಿ ಕೊಂಚ ಸಡಿಲಿಕೆ ಜಾರಿಮಾಡಲಾಗಿದೆ. 
1. ಹಣ್ಣು, ತರಕಾರಿ, ಸರಕು, ಹಾಲು, ಹಾಲು ಉತ್ಪನ್ನಗಳ ಅಂಗಡಿಗಳನ್ನು, ಹೋಟೆಲ್ ಗಳನ್ನು, ಬೇಕರಿಗಳನ್ನು, ಮೀನು-ಮಾಂಸ ಸಹಕಾರಿ ಸಂಘಗಳನ್ನು ಬೆಳಗ್ಗೆ 7 ರಿಂದ ಸಂಜೆ 7.30 ವರೆಗೆ ತೆರೆಯಬಹುದು. ಹೋಟೆಲ್ ಮತ್ತು ಬೇಕರಿಗಳಲ್ಲಿ ಪಾರ್ಸೆಲ್ ಮಾತ್ರ. 
2. ಬಟ್ಟೆ, ಬಂಗಾರದ ಅಂಗಡಿಗಳು( ಆನ್ ಲೈನ್ ವ್ಯಾಪಾರ  ಮತ್ತು ಹೋಂ ಡೆಲಿವರಿ ಮಾತ್ರ) ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ತೆರೆಯಬಹುದು. ವಿವಾಹ ಸಂಬಂಧ ಖರೀದಿಗೆ ಬರುವ ಮಂದಿ ಆಮಂತ್ರಣ ಪತ್ರಿಕೆ ತಮ್ಮ ಬಳಿ ಇರಿಸಿಕೊಂಡಿರಬೇಕು. 
3. ಕಲಿಕೋಪಕರಣಗಳ ಅಂಗಡಿಗಳು ಸೋಮ, ಬುಧ, ಶುಕ್ರವಾರದಂದು ಸಂಜೆ 5 ಗಂಟೆ ವರೆಗೆ ಮಾತ್ರ ತೆರೆಯಬಹುದು. 
4. ಬ್ಯಾಂಕ್ ಗಳು ಸೋಮ, ಬುಧ, ಶುಕ್ರವಾರದಂದು ಸಂಜೆ 5 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. 
5. ಎಲ್ಲ ಉದ್ದಿಮೆ ಕೇಂದ್ರಗಳು ( ಹುರಿಹಗ್ಗ, ಗೇರುಬೀಜ, ಮುದ್ರಣ ಸಹಿತ) ಅನಿವಾರ್ಯ ಸಿಬ್ಬಂದಿ (ಶೇ 50 ಮೀರದಂತೆ) ಸೇರಿಸಿ ತೆರೆದು ಕಾರ್ಯಾಚರಿಸಬಹುದು. 
6. ಉದ್ದಿಮೆ ಸಂಸ್ಥೆಗಳ ಅಗತ್ಯಕ್ಕೆ ಕಚ್ಚಾ ಸಾಮಾಗ್ರಿಗಳು ಇತ್ಯಾದಿ(ಪ್ಯಾಕೇಜಿಂಗ್ ಸಹಿತ) ನೀಡು ಸಂಸ್ಥೆಗಳು/ ಅಂಗಡಿಗಳು ಮಂಗಳ, ಗುರು, ಶನಿವಾರದಂದು ಸಂಜೆ 5 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. 
7. ವರ್ಕ್ ಶಾಪ್ ಗಳು, ಟಯರ್ ರೀಸಾಲಿಂಗ್-ಪಂಚರ್ ಸರ್ವೀಸ್, ವಾಹನ ಶೋ ರೂಂ ಗಳ ಸಂಬಂಧ ವರ್ಕ್ ಶಾಪ್ ಗಳು , ಕಟ್ಟಡ ನಿರ್ಮಾಣ ಸಂಬಮದ ಮರದ ಹಲಗೆಗಳ ವರ್ಕ್ ಶಾಪ್ ಗಳು ಶನಿ, ಭಾನುವಾರದಮದು ಬೆಳಗ್ಗೆ 9 ರಿಂದ ಸಂಜೆ 7.30 ವರೆಗೆ ತೆರೆದು ಕಾರ್ಯಾಚರಿಸಬಹುದು. 
8. ನೇತ್ರ ತಪಾಸಣೆ ಕೇಂದ್ರಗಳು, ಕನ್ನಡಕ, ಶ್ರವಣ ಯಂತ್ರ ಮಾರಾಟ ಕೇಂದ್ರಗಳು, ಕೃತಕ ಕಾಲು ಮಾರಾಟ, ದುರಸ್ತಿ ಸಂಸ್ಥೆಗಳು, ಅಡುಗೆ ಅನಿಲ ಒಲೆ ದುರಸ್ತಿ ಕೇಂದ್ರಗಳು, ಮೊಬೈಲ್, ಕಂಪ್ಯೂಟರ್ ದುರಸ್ತಿ ಅಂಗಡಿಗಳು ಮಂಗಳ, ಶನಿವಾರದಂದು ತೆರೆಯಬಹುದು. 
9. ಆಟೋಮೊಬೈಲ್ ಬಿಡಿಭಾಗಗಳ ಅಂಗಡಿಗಳು ಸೋಮ, ಗುರುವಾರದಂದು ತೆರೆಯಬಹುದು. 
10. ಕಟ್ಟಡ ನಿರ್ಮಾಣ ಚಟುವಟಿಕೆಗಳ ಅಗತ್ಯದ ಸಾಮಾಗ್ರಿ, ಪೈಂಟಿಂಗ್, ಇಲಕ್ಟ್ರಿಕಲ್, ಪ್ಲಂಬಿಂಗ್ ಉತ್ಪನ್ನಗಳು , ಇತರ ಸಾಮಾಗ್ರಿಗಳ ಅಂಗಡಿಗಳು ಬೆಳಗ್ಗೆ 11 ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. 
11. ಪಡಿತರ ಅಂಗಡಿಗಳು ಸೋಮವಾರದಿಂದ ಶನಿವಾರ ವರೆಗೆ ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30 ವರೆಗೆ ತೆರೆದು ಕಾರ್ಯಾಚರಿಸಬಹುದು. 
12. ಕರ್ಗಲ್ಲು/ ಕೆಂಪುಕಲ್ಲು ಕೆತ್ತುವ ಸಾಮಾಗ್ರಿಗಳ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿಯಿದೆ. 
13. ರಬ್ಬರ್ ಮರಗಳಿಗೆ ರೈನ್ ಗಾರ್ಡ್ ಲಗತ್ತುವ ಸಾಮಾಗ್ರಿಗಳ ಮಾರಾಟ ಅಂಗಡಿಗಳು ತೆರೆಯಬಹುದು. 
14. ಕಾಡುತ್ಪತ್ತಿ ವ್ಯಾಪಾರ ಅಂಗಡಿಗಳು ಕಾಸರಗೊಡು ಜಿಲ್ಲೆಯಲ್ಲಿ ಮಂಗಳವಾರ ತೆರೆದು ಕಾರ್ಯಾಚರಿಸಬಹುದು. 
15. ಕ್ರಷರ್ ಗಳು, ಪಶು ಆಹಾರ, ಕೋಳಿ ತಿನಿಸು ಮಾರಾಟ ಅಂಗಡಿಗಳು ಸೋಮವಾರದಿಂದ ಶನಿವಾರ ವರೆಗೆ ಬೆಳಗ್ಗೆ 7 ರಿಂದ ಸಂಜೆ 7.30 ವರೆಗೆ ತೆರೆಯಬಹುದು. 
16. ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಸಾರ್ವಜನಿಕ ಪ್ರದೇಶಗಳಲ್ಲಿ ವ್ಯಾಯಾಮ ನಡೆಸಬಹುದು. ಬೆಳಗ್ಗೆ 5 ರಿಂದ 7 ಗಂಟೆ ವರೆಗೆ , ಸಂಜೆ 7 ರಿಂದ ರಾತ್ರಿ 9 ಗಂಟೆ ವರೆಗೆ ವ್ಯಾಯಾಮ ನಡೆಸಲು ಅನುಮತಿಯಿದೆ. 
17. ಗುಜರಿ ದಾಸ್ತಾನು ಇರಿಸಿದ ಜಾಗದಲ್ಲಿ ಅವನ್ನು ವರ್ಗಾಯಿಸಲು ವಾರದಲ್ಲಿ 2 ದಿನ ಅನುಮತಿಯಿದೆ. 
18. ಶೇಂದಿ ಅಂಗಡಿಗಳಲ್ಲಿ ಶೇಂದಿ ಪಾರ್ಸೆಲ್ ನೀಡಲು ಅನುಮತಿಯಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಇವು ಚಟುವಟಿಕೆ ನಡೆಸಬೇಕು. 
.............

Comments