- Get link
- X
- Other Apps
- Get link
- X
- Other Apps

ಕಿಳಿಂಗಾರು: ನೂತನ ಶೈಕ್ಷಣಿಕ ಅಧ್ಯಯನ ವರ್ಷ ಆರಂಭಗೊಂಡು, ತರಗತಿಗಳು ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತದೆ. ಆದರೆ ಆರ್ಥಿಕವಾಗಿ ತೀರಾ ಹಿಂದುಳಿದವರು ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆಗೀಡಾಗಬೇಕಾದ ಸಂದರ್ಭ. ಕಲಿಯುವಿಕೆಯಲ್ಲಿ ಆಸಕ್ತಿಯಿದ್ದರೂ ಸತತ ಲೋಕ್ ಡೌನ್ ,ಉದ್ಯೋಗ ಇಲ್ಲದುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿ ಮಕ್ಕಳಿಗೆ ಸರಿಯಾಗಿ ಡಿಜಿಟಲ್ ಮಾಧ್ಯಮದ ತರಗತಿಗಳನ್ನು ನೀಡಲು ಅಸಹಾಯಕರಾದರು.
ಇಂತಹ ಕಷ್ಟದ ಸಂದರ್ಭದಲ್ಲಿ ಮಕ್ಕಳ ವಿದ್ಯಾರ್ಜನೆಗೆ ಯಾವುದೇ ಕುಂದು ಕೊರತೆಗಳಾಗಬಾರದೆಂದು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಕೊಡುಗೈದಾನಿ , ಬದಿಯಡ್ಕ ಪಂಚಾಯತ್ ಮಾಜಿ ಅಧ್ಯಕ್ಷರು , ಹಾಲಿ ಸದಸ್ಯರು, ಕಿಳಿಂಗಾರು ಶಾಲಾ ವ್ಯವಸ್ಥಾಪಕರೂ ಆದ ಶ್ರೀ.ಕೆ.ಎನ್ ಕೃಷ್ಣ ಭಟ್ ಮಕ್ಕಳ ಓನ್ಲೈನ್ ಕಲಿಕೆಗೆ ಸಹಾಯಹಸ್ತ ನೀಡಿದರು. ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ಫೋನ್ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡಿದರು. ಕಿಳಿಂಗಾರು ಸೀತಾಂಗೋಳಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸಿದರು. ಈ ಸಂದರ್ಭದಲ್ಲಿ ಎ.ಎಲ್.ಪಿ ಕಿಳಿಂಗಾರು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ, ಅಧ್ಯಾಪಿಕೆ ಸಹನಾ ಯಂ ಉಪಸ್ಥಿತರಿದ್ದರು.


FOX24LIVE NEWS CHANNEL
https://youtube.com/c/Fox24livenewschannel
- Get link
- X
- Other Apps
Comments
Post a Comment